ಹೇಗೆ ಮಾಡೋದು?
ಮೊದಲಿಗೆ ಕ್ಯಾರೆಟ್ ತುರಿದಿಟ್ಟುಕೊಳ್ಳಿ. ನಂತರ ಸ್ಟೌ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ..
ಇದಕ್ಕೆ ಕಡಲೆ ಬೇಳೆ , ಉದ್ದಿನ ಬೇಳೆ , ಸಾಸಿವೆ , ಹಸಿಮೆಣಸು, ಕರಿಬೇವು ಹಾಕಿ, ನಂತರ ಈರುಳ್ಳಿ ಹಾಗೂ ಉಪ್ಪು ಹಾಕಿ ಬಾಡಿಸಿ
ಇದೀಗ ತುರಿದ ಕ್ಯಾರೆಟ್ ಹಾಕಿ ಫ್ರೈ ಮಾಡಿ. ಈಗ ಖಾರಪುಡಿ, ದನಿಯಾ ಪುಡಿ, ಗರಂಮಸಾಲ ಪುಡಿ ಹಾಕಿ ಮಿಶ್ರಣ ಮಾಡಿ. ಕೊನೆಯಲ್ಲಿ ಕೊಬ್ಬರಿ ತುರಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಇದೀಗ ರುಚಿಕರವಾದ ಕ್ಯಾರೆಟ್ ಫ್ರೈ ಸವಿಯಲು ಸಿದ್ಧ.