ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಸ್ಸಿನೊಳಗೆ ವಾಂತಿ ಮಾಡಿಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದ ಯುವತಿಯನ್ನು ಬಸ್‌ನಲ್ಲಿಯೇ ಸೀದ ಆಸ್ಪತ್ರೆಗೆ ಕರೆತರಲಾಗಿದೆ.
ದೆ. ಶಿರ್ವದಿಂದ ಉಡುಪಿಗೆ ಬರುತ್ತಿದ್ದ ನವೀನ್ ಹೆಸರಿನ ಬಸ್ನಲ್ಲಿ ಈ ಘಟನೆ ನಡೆದಿದ್ದು,ಖಾಸಗಿ ಬಸ್ ಚಾಲಕ ಶಶಿಕಾಂತ್ ಹಾಗೂ ನಿರ್ವಾಹಕ ಸಲೀಂ ಅಸ್ವಸ್ಥಗೊಂಡ ಯುವತಿಯನ್ನು ಕಂಡು ಆಸ್ಪತ್ರೆಯತ್ರ ಬಸ್ ತಿರುಗಿಸಿದ್ದಾರೆ. ಖಾಸಗಿ ಬಸ್ ಸಿಬ್ಬಂದಿ ಮಾನವೀಯತೆ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಸ್ನಲ್ಲಿದ್ದ ಯುವತಿ ಉಡುಪಿಯ ಹಳೆ ತಾಲ್ಲೂಕು ಕಚೇರಿ ಬಳಿ ತಲುಪುವ ವೇಳೆ ಅಸ್ವಸ್ಥಳಾಗಿದ್ದಾಳೆ. ಬಸ್ನಲ್ಲೇ ವಾಂತಿ ಮಾಡಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾಳೆ. ತಕ್ಷಣವೇ ವಿಚಾರ ತಿಳಿದ ಚಾಲಕ ಹತ್ತಿರದ ಖಾಸಗಿ ಟಿಎಂಎ ಪೈ ಆಸ್ಪತ್ರೆಗೆ ಬಸ್ ಅನ್ನು ಕೊಂಡೊಯ್ದಿದ್ದಾರೆ.
ನೇರವಾಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಬಸ್ಸನ್ನು ಕೊಂಡೊಯ್ದಿದ್ದಾರೆ. ತಕ್ಷಣವೇ ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಯುವತಿಯ ಮನೆಯವರಿಗೂ ಮಾಹಿತಿ ನೀಡಲಾಗಿದೆ.