ಹೊಸದಿಗಂತ ಮಂಡ್ಯ :
ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸಂಜೆ 7 ಗಂಟೆ ವೇಳೆಗೆ ಜಿಲ್ಲೆಯ ಗಡಿಭಾಗವಾಗಿರುವ ನಿಡಘಟ್ಟಕ್ಕೆ ಬಂದು ತಲುಪಿತು.
ಮಂಡ್ಯ ಜಿಲ್ಲಾ ಬಿಜೆಪಿ ವತಿಯಿಂದ ಪಾದಯಾತ್ರೆಯನ್ನು ಸ್ವಾಗತಿಸಿದ ಕಾರ್ಯಕರ್ತರು ಮತ್ತು ಮುಖಂಡರು ಮಜ್ಜಿಗೆ, ಜ್ಯೂಸ್ ವಿತರಿಸಿ ಬರಮಾಡಿಕೊಂಡರು.
ಚನ್ನಪಟ್ಟಣದ ಮಳೂರು ಗ್ರಾಮದಿಂದ ಇಂದು ಬೆಳಗ್ಗೆ ಹೊರಟ ಪಾದಯಾತ್ರೆ ಸುಮಾರು 20 ಕಿ.ಮೀ. ಸಾಗಿ ನಿಡಘಟ್ಟದ ಸುಮಿತ್ರದೇವಿ ಕನ್ವಂಷನ್ ಹಾಲ್‌ನಲ್ಲಿ ಬೀಡು ಬಿಟ್ಟಿದೆ. ನಾಳೆ ಮಂಗಳವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗುವ ಪಾದಯಾತ್ರೆಯಲ್ಲಿ ಸಾಗುವ ಮುಖಂಡರು ಮದ್ದೂರಿನಲ್ಲಿ ಬೆಳಗ್ಗೆ 11 ಗಂಟೆಗೆ ಬಹಿರಂಗ ಸಭೆಯಲ್ಲಿ ಭಾಗವಹಿಸುವರು. ರಾತ್ರಿ 8 ಗಂಟೆಗೆ ಮಂಡ್ಯ ಹೊರ ವಲಯದಲ್ಲಿರುವ ಶಶಿಕಿರಣ ಕನ್ವೆನ್ಷ್‌ನ್ ಹಾಲ್‌ನಲ್ಲಿ ವಾಸ್ತವ್ಯ ಹೂಡಲಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್, ಮುಖಂಡರಾದ ಎಸ್.ಪಿ. ಸ್ವಾಮಿ, ಡಾ. ಸಿದ್ದರಾಮಯ್ಯ, ಸತೀಶ್ ಇತರರು ಹಾಜರಿದ್ದರು.