ಶೇಖ್‌ ಹಸೀನಾ ಪರಾರಿಯಾಗುತ್ತಿದ್ದಂತೆ ಮನೆಗೆ ನುಗ್ಗಿ ಬೇಕಾದ್ದು ಎತ್ತುಕೊಂಡು ಬಂದ ಜನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಂಗ್ಲಾದೇಶದಿಂದ ಶೇಖ್ ಹಸೀನಾ ಪರಾರಿಯಾಗಿದ್ದಾರೆ ಎಂದು ತಿಳಿದಾಕ್ಷಣ ಜನ ಸಂಭ್ರಮಾಚರಣೆ ಮಾಡಿದ್ದಾರೆ, ಜತೆಗೆ ಮನೆಗೆ ನುಗ್ಗಿ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಶಾಪಿಂಗ್‌ ಮಾಡಿದ್ದಾರೆ.

ಲಕ್ಷಾಂತರ ಜನರು ಪ್ರಧಾನಿಯವರ ಅಧಿಕೃತ ಸರ್ಕಾರಿ ಬಂಗಲೆಗೆ ನುಗ್ಗಿ, ಅಲ್ಲಿರುವ ಪೀಠೋಪಕರಣ, ಅಡುಗೆಮನೆಯ ವಸ್ತುಗಳು, ಬಾತುಕೋಳಿ, ಶೇಖ್ ಹಸೀನಾ ಅವರ ಸೀರೆ, ಒಡವೆಗಳು ಎಲ್ಲವನ್ನೂ ದೋಚಿಕೊಂಡು ಹೋಗಿದ್ದಾರೆ.

Bangladesh PM Sheikh Hasina's home looted: Watch protesters steal rugs,  utensils, take selfies on bed and PM's chair - The Economic Timesಶೇಖ್ ಹಸೀನಾ ಅವರ ಅಡುಗೆಮನೆಯಲ್ಲಿದ್ದ ಸ್ವೀಟ್​ಗಳನ್ನು ತಿನ್ನುತ್ತಾ ಅನೇಕರು ರೀಲ್ಸ್ ಮಾಡಿದ್ದಾರೆ. ಇನ್ನು ಕೆಲವರು ಪ್ರಧಾನಿಯ ಬೆಡ್​ರೂಂನಲ್ಲಿ ಮಲಗಿ ವಿಡಿಯೋ ಮಾಡಿಕೊಂಡಿದ್ದಾರೆ. ಶೇಖ್ ಹಸೀನಾ ಅವರ ಸೀರೆಗಳಿರುವ ಸೂಟ್​ಕೇಸ್ ಎತ್ತಿಕೊಂಡು ಹೊರಟ ವ್ಯಕ್ತಿಯೊಬ್ಬ ನನ್ನ ಹೆಂಡತಿಗೂ ಈ ಸೀರೆ ಉಡಿಸಿ ಪ್ರಧಾನಿಯಾಗಿ ಮಾಡುತ್ತೇನೆ ಎಂದು ಹೇಳಿದ್ದಾನೆ.

ಶೇಖ್ ಹಸೀನಾ ರಾಜೀನಾಮೆ ನೀಡಿ, ದೇಶ ಬಿಟ್ಟು ಪರಾರಿಯಾಗುತ್ತಿದ್ದಂತೆ ಢಾಕಾದಲ್ಲಿರುವ ಪಿಎಂ ಪ್ಯಾಲೇಸ್‌ಗೆ ನುಗ್ಗಿದ ಪ್ರತಿಭಟನಾಕಾರರು ಶೇಖ್ ಹಸೀನಾ ಅವರ ಸೀರೆ, ಒಳಉಡುಪು, ಬ್ಲೌಸ್​ಗಳನ್ನೂ ಬಿಡದೆ ಎಲ್ಲವನ್ನೂ ಕದ್ದು, ಅದರ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!