ZIKA VIRUS | ಪುಣೆಯಲ್ಲಿ ಝಿಕಾ ಹಾವಳಿ, ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಹಾರಾಷ್ಟ್ರದ ಪುಣೆಯಲ್ಲಿ ಝಿಕಾ ವೈರಸ್​ನಿಂದ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಜೂನ್​ನಿಂದ ಇಲ್ಲಿಯವವರೆಗೆ 66 ಪ್ರಕರಣಗಳು ದೃಢಪಟ್ಟಿದ್ದು, ಅವುಗಳಲ್ಲಿ 26 ಮಂದಿ ಗರ್ಭಣಿಯರಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೃತಪಟ್ಟವರೆಲ್ಲಾ 68-78ರ ಆಸುಪಾಸಿನವರು ಅವರ ಸಾವಿಗೆ ಝಿಕಾ ವೈರಸ್ ಮಾತ್ರ ಕಾರಣವಲ್ಲ, ಹಲವು ಆರೋಗ್ಯ ಸಮಸ್ಯೆಗಳು ಮೊದಲೇ ಇದ್ದವು ಎಂಬುದು ತಿಳಿದುಬಂದಿದೆ.

ಸೋಂಕಿತರಲ್ಲಿ 26 ಮಂದಿ ಗರ್ಭಿಣಿಯರರಿರುವ ಕಾರಣ ಸೂಕ್ಷ್ಮವಾಗಿ ಅವರನ್ನು ಗಮನಿಸಲಾಗುತ್ತಿದೆ. ಹೆಚ್ಚಿನವರ ಆರೋಗ್ಯ ಉತ್ತಮವಾಗಿದೆ. ಪುಣೆಯಲ್ಲಿ ಜುಲೈ 1 ರಂದು ಝಿಕಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಎರಂಡ್ವಾನೆಯಲ್ಲಿ ವಾಸಿಸುತ್ತಿರುವ ಇಬ್ಬರು ಗರ್ಭಿಣಿಯರಿಗೆ ಸೋಂಕು ತಗುಲಿದೆ.

ಜ್ವರ, ಕೀಲು ನೋವು, ದೇಹದ ನೋವು, ತಲೆನೋವು, ಕೆಂಪು ಕಣ್ಣುಗಳು, ವಾಂತಿ, ಅಸ್ವಸ್ಥತೆ, ಜ್ವರ ಮತ್ತು ದೇಹದ ದದ್ದುಗಳು ಝಿಕಾ ಲಕ್ಷಣವಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!