ಒಂದು ಲೈಕ್ ಗಾಗಿ ಜೀವದ ಜೊತೆ ಚೆಲ್ಲಾಟ ಎಷ್ಟು ಸರಿ? ‘ಗಂಗೆ’ಯನ್ನು ಬಿಡದ ರೀಲ್ಸ್ ಹುಚ್ಚರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೀಲ್ಸ್ ಹುಚ್ಚಿನಿಂದ ಅನೇಕ ಜೀವಗಳು ಬಲಿಯಾಗಿವೆ. ಇದೀಗ ಓರ್ವ ಯುವಕ ಅಪಾಯಕಾರಿ ಸಾಹಸ ಪ್ರದರ್ಶಿಸಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಗಂಗಾನದಿ ದಡದಲ್ಲಿದ್ದ ವಿದ್ಯುತ್ ಕಂಬಕ್ಕೆ ಯುವಕನೊಬ್ಬ ಹತ್ತಿ ನದಿಗೆ ಹಾರಿದ ಘಟನೆ ನಡೆದಿದೆ. ಕಾನ್ಪುರದ ಭೈರವ್ ಘಾಟ್ ಬಳಿ ಈ ಘಟನೆ ನಡೆದಿದೆ.

ಭೈರವ್ ಘಾಟ್ ಅಂಚಿನಲ್ಲಿರುವ ವಿದ್ಯುತ್ ಕಂಬಕ್ಕೆ ಈತ ಹತ್ತಿ ತುಂಬಿ ಹರಿಯುತ್ತಿರುವ ನದಿಗೆ ಹಾರಿದ್ದಾನೆ. ಈ ವಿಡಿಯೋ ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಭೈರವ ಘಾಟ್ ತಟದಲ್ಲಿ ವಿದ್ಯುತ್ ಕಂಬವಿದೆ. ಈ ಕಂಬಕ್ಕೆ ಆಧಾರವಾಗಿ ಮತ್ತೊಂದು ವಿದ್ಯುತ್ ಕಂಬ ಅಳವಡಿಸಲಾಗಿದೆ. ಈ ಕಂಬದ ಮೂಲಕ ವಿದ್ಯುತ್ ಕಂಬಕ್ಕೆ ಹತ್ತಿದ್ದಾನೆ. ಬಳಿಕ ಕೆಲ ಕಾಲ ವಿದ್ಯುತ್ ಕಂಬದ ಮೇಲೆ ಕುಳಿತ್ತಿದ್ದ. ಅದೃಷ್ಟವಶಾತ್ ಆ ಸಮಯದಲ್ಲಿ ವಿದ್ಯುತ್ ಇರಲಿಲ್ಲ. ಹಾಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ನದಿಗೆ ಹಾರಿದ ಯುವಕ ಬಳಿಕ ಈಜಿ ದಡ ಸೇರಿದ್ದಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಆಕ್ರೋಶ ಹೆಚ್ಚಾಗಿದೆ. ಈ ಹುಚ್ಚಾಟಕ್ಕೆ ಕಡಿವಾಣ ಹಾಕಬೇಕು. ಅಪಾಯಕಾರಿ ಸ್ಟಂಟ್‌ಗಳೊಂದಿಗೆ ಜೀವಕ್ಕೆ ಕುತ್ತು ತರುತ್ತಿದ್ದಾರೆ. ಈ ರೀತಿಯ ಸಾಹಸಕ್ಕೆ ಅವಕಾಶ ನೀಡಬಾರದು. ಇದು ಉತ್ತಮ ಸಮಾಜಕ್ಕೆ ಕೆಟ್ಟ ಸಂಕೇತ ಎಂದು ಹಲವರು ನಂಬುತ್ತಾರೆ. ಇಲ್ಲಿನ ವಿದ್ಯುತ್ ಕಂಬ ಏರುವ ಹಕ್ಕು ಕೊಟ್ಟವರು ಯಾರು? ಸಿಬ್ಬಂದಿ ಎಲ್ಲಿದ್ದಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!