ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲಸ ಕೊಡಿಸುವ ನೆಪದಲ್ಲಿ ಯುವತಿಯನ್ನು ಕರೆಸಿಕೊಂಡು ಕೋರ್ಟ್ ಆವರಣದಲ್ಲೇ ವಕೀಲನೊಬ್ಬ ಅತ್ಯಾಚಾರವೆಸಗಿದ್ದಾನೆ.
ತೀಸ್ ಹಜಾರಿ ಕೋರ್ಟ್ನಲ್ಲಿರುವ ಚೇಂಬರ್ನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು 21 ವರ್ಷದ ಯುವತಿ ದೂರು ನೀಡಿದ್ದಾರೆ. ಜುಲೈ 30ರಂದು ಯುವತಿಯ ಸಂಬಂಧಿ ಸಬ್ಜಿ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಕೀಲರು ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು, ಆಕೆಯ ಶೈಕ್ಷಣಿಕ ಅರ್ಹತೆಯನ್ನು ತೋರಿಸಲು ಅವರ ಚೇಂಬರ್ಗೆ ಬರುವಂತೆ ತಿಳಿಸಿದ್ದರು. ಮುಂದಿನ 8-10 ದಿನಗಳೊಳಗಾಗಿ ಕೆಲಸ ಕೊಡಿಸುತ್ತೇನೆ ಎಂದಿದ್ದರು. ಮತ್ತೊಮ್ಮೆ ಕಚೇರಿಗೆ ಕರೆಸಿಕೊಂಡಿದ್ದರು. ಮಾತನಾಡುತ್ತಾ ಜೀವನದಲ್ಲಿ ಸ್ನೇಹಿತರು ಮುಖ್ಯ ಎಂದೆಲ್ಲಾ ಹೇಳಿದ್ದರು. ನಂತರ ಅತ್ಯಾಚಾರವೆಸಗಿ, ಹಣ ಕೊಟ್ಟು ಮನೆಗೆ ಹೋಗುವಂತೆ ಗದರಿದ್ದರು. ವಿಷಯ ಹೊರಬಂದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರು ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.