17 ತಿಂಗಳ ಬಳಿಕ ತಿಹಾರ್ ಜೈಲಿನಿಂದ ಹೊರಬಂದ ಆಪ್ ನಾಯಕ ಮನೀಶ್ ಸಿಸೋಡಿಯಾ

ಹೊಸದಿಗಂತ ಡಿಜಿಟಲ್ ಡೆಸ್ಕ್;

ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಮನೀಶ್ ಸಿಸೋಡಿಯಾ 17 ತಿಂಗಳ ಜೈಲು ವಾಸದ ಬಳಿಕ ಶುಕ್ರವಾರ(ಆಗಸ್ಟ್ 9) ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದ ಬಳಿಕ ಸಿಸೋಡಿಯಾ ಅವರು ಬಿಡುಗಡೆಯಾಗಿ ಹೊರ ಬಂದಿದ್ದಾರೆ.

ಸಿಸೋಡಿಯಾ ಅವರನ್ನು 2023 ರ ಫೆಬ್ರವರಿ 26ರಂದು ಸಿಬಿಐ, ಎರಡು ವಾರಗಳ ನಂತರ ಇಡಿ ಬಂಧಿಸಿತ್ತು. ಈಗ ಎರಡೂ ಪ್ರಕರಣಗಳಲ್ಲಿ ಜಾಮೀನು ಪಡೆದು ಹೊರ ಬಂದಿದ್ದಾರೆ.

ಜೈಲಿನಿಂದ ಹೊರಬಂದ ಸಿಸೋಡಿಯಾ ಅವರನ್ನು ಸ್ವಾಗತಿಸಲು ಆಮ್ ಆದ್ಮಿ ಪಕ್ಷದ ಬೆಂಬಲಿಗರು ಧ್ವಜಗಳನ್ನು ಹಿಡಿದು ಜೋರಾಗಿ ಹರ್ಷೋದ್ಗಾರ ಮಾಡಿದರು.

‘ನಾವು ಈ ಕಾನೂನು ಹೋರಾಟವನ್ನು ಸಂವಿಧಾನದ ಮೂಲಕ ತಾರ್ಕಿಕ ಅಂತ್ಯಕ್ಕೆ ತಂದಿದ್ದೇವೆ. ನನ್ನೊಂದಿಗಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅವರು ‘ಕೇಜ್ರಿವಾಲ್, ಕೇಜ್ರಿವಾಲ್’ ಎಂದು ಘೋಷಣೆಯನ್ನು ಸಿಸೋಡಿಯಾ ಕೂಗಿದರು.

‘ಇಂದು ಸತ್ಯ ಗೆದ್ದಿದೆ. ಕೊನೆಯಲ್ಲಿ, ಸತ್ಯವೇ ಗೆಲ್ಲುತ್ತದೆ,’ ಎಂದು ದೆಹಲಿ ಮುಖ್ಯಮಂತ್ರಿಯ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಟೀಮ್ ಕೇಜ್ರಿವಾಲ್’ ಪೋಸ್ಟ್ ಮಾಡಿದೆ.

ಕೇಜ್ರಿವಾಲ್ ಸದ್ಯ ಅದೇ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!