ಬಂದರು ನಗರಿಗೆ ಬಂತು ‘ಇಂಡಿಗೋ’ ವಿಮಾನ: ಮಂಗಳೂರು ಏರ್ ಪೋರ್ಟ್ ನಲ್ಲಿ ವಾಟರ್ ಕ್ಯಾನನ್ ಸೆಲ್ಯೂಟ್!

ಹೊಸದಿಗಂತ ವರದಿ, ಮಂಗಳೂರು:

ಮಂಗಳೂರಿನಿಂದ ಅಬುದಾಬಿಗೆ ಪ್ರಯಾಣಿಸುವವರಿಗೊಂದು ಸಿಹಿ ಸುದ್ದಿ ಇದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಪ್ರತಿದಿನ ಇಂಡಿಗೋ ವಿಮಾನ ಹಾರಾಟ ಆರಂಭವಾಗಿದೆ. ಕಳೆದ ಹಲವು ಸಮಯದ ಪ್ರಯಾಣಿಕರ ಬೇಡಿಕೆಗೆ ಇಂಡಿಗೋ ಸ್ಪಂದಿಸಿದ್ದು, ನಿತ್ಯ ವಿಮಾನ ಹಾರಾಟ ಆರಂಭವಾಗಿದೆ.

ಆ.9ರಿಂದ ಪ್ರತಿದಿನ ಇಂಡಿಗೋ ವಿಮಾನ ಬಂದರು ನಗರಿಯಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿಗೆ ಸಂಪರ್ಕಿಸುತ್ತಿದೆ. ಇದು ದುಬೈ ನಂತರ ಮಂಗಳೂರಿನಿಂದ ವಿಮಾನಯಾನದ ಎರಡನೇ ಸಾಗರೋತ್ತರ ತಾಣವಾಗಿದೆ.

ಕ್ಯಾಪ್ಟನ್ ವಿಕರ್ ಯಾಸೀನ್ ನೇತೃತ್ವದ ಫ್ಲೈಟ್ 6ಇ 1442- 180 ಪ್ರಯಾಣಿಕರೊಂದಿಗೆ ಅಬುಧಾಬಿಗೆ ರಾತ್ರಿ 9.40ಕ್ಕೆ ಹೊರಟಿತು.

ಇದರೊಂದಿಗೆ, ಈಗ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಬುಧಾಬಿಗೆ ಎರಡು ದೈನಂದಿನ ವಿಮಾನಗಳನ್ನು ಹೊಂದಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತೊಂದು ದೈನಂದಿನ ವಿಮಾನವನ್ನು ನಿರ್ವಹಿಸುತ್ತಿದೆ.

ಆರು ದೇಶೀಯ ಸ್ಥಳಗಳಿಗೆ ಸಂಪರ್ಕ
ಆ. 10 ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮೊದಲ ಇಂಡಿಗೊ ಅಬುಧಾಬಿ-ಮಂಗಳೂರು ವಿಮಾನಕ್ಕೆ ಸಾಂಪ್ರದಾಯಿಕ ವಾಟರ್ ಕ್ಯಾನನ್ ವಂದನೆ ಸಲ್ಲಿಸಿತು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಸ್ತುತ ಎಂಟು ಮಧ್ಯಪ್ರಾಚ್ಯ ಸ್ಥಳಗಳಿಗೆ ಮತ್ತು ಆರು ದೇಶೀಯ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!