ದಿನಭವಿಷ್ಯ; ಸಂಗಾತಿಯ ಜೊತೆ ಕಲಹ ಸಾಧ್ಯತೆ ಎಚ್ಚರ!

ಮೇಷ
ಅನ್ಯರಿಗೆ ಮಾರ್ಗದರ್ಶಿ ಆಗುವ ಕಾರ್ಯ ಎಸಗುವಿರಿ. ವೃತ್ತಿ ಕ್ಷೇತ್ರದಲ್ಲಿ ಕೋಲಾಹಲ ಎದುರಿಸುವಿರಿ.ಆದರೆ ಅದನ್ನು ನಿಭಾಯಿಸಲು ಸಪಲರಾಗುವಿರಿ.

ವೃಷಭ
ನಿಮಗಿಂದು ಹೆಚ್ಚು ವಿಶ್ವಾಸ, ಧೈರ್ಯ. ಗುರಿ ಸಾಧನೆಯಲ್ಲಿ ಸಫಲ.ಭವಿಷ್ಯದ ಯೋಜನೆ ಹಾಕಿಕೊಳ್ಳಲು ಸಕಾಲ.ಕಣ್ಣಿನ ಸೋಂಕು ಉಂಟಾದೀತು.

ಮಿಥುನ
ಇತರರ ಜತೆ ಸಂವಹನದಲ್ಲಿ ಸಮಸ್ಯೆ. ಹಾಗಾಗಿ ಭಿನ್ನಮತ ಉಂಟಾದೀತು. ನಿಮ್ಮ ಮೇಲೆ ಅಪಪ್ರಚಾರ ನಡೆಯಲು ಅವಕಾಶ ಕೊಡದಿರಿ.

ಕಟಕ
ಉತ್ಸಾಹದ ದಿನ. ಹಾಗಾಗಿ ಹಿನ್ನಡೆ ನಿಮಗೆ ಬಾಧಿಸದು. ಪ್ರೀತಿಪಾತ್ರರ ಜತೆ ಕಾಲಕ್ಷೇಪ. ಜೀವನಶೈಲಿ ಬದಲಿಸಬೇಕಾದ ಅನಿವಾರ್ಯತೆ.

ಸಿಂಹ
ಮಾನಸಿಕವಾಗಿ ಹೆಚ್ಚು ಬಳಲುವಿರಿ.ಇದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.ನಿಮಗೆ ವಿಶ್ರಾಂತಿಯ ಅಗತ್ಯವಿದೆ.  ವಿರಾಮ ಪಡೆಯಿರಿ.

ಕನ್ಯಾ
ವೃತ್ತಿಯಲ್ಲಿ ನಿಮ್ಮ ಕಾರ್ಯವು ನಿಮಗೇ ತೃಪ್ತಿ ತರಲಿದೆ.ಕೌಟುಂಬಿಕ ಪರಿಸರ ಹರ್ಷ ತರುವುದು.ಕೆಲಸಮಯದ ಬಳಿಕ ಆತ್ಮೀಯರ ಭೇಟಿ.

ತುಲಾ
ಯಾವುದೋ ಕೊರತೆ, ಸಮಸ್ಯೆ ಕಾಡುವುದು. ಹಾಗಾಗಿ ಕೆಲಸದಲ್ಲಿ ನಿರಾಸಕ್ತಿ.ನಿಮ್ಮಿಂದ ತಪ್ಪು ಉಂಟಾದೀತು. ಗಮನವನ್ನು ಕೇಂದ್ರೀಕರಿಸಿ.

ವೃಶ್ಚಿಕ
ಕುಟುಂಬ ಸದಸ್ಯರ ಜತೆಗಿನ ಹಳೆಯ ಜಗಳ, ಭಿನ್ನಮತ ನಿವಾರಿಸಿಕೊಳ್ಳಲು ಆದ್ಯತೆ ಕೊಡಿ. ಎಲ್ಲವನ್ನು ಮರೆತು ಮುಂದೆ ಸಾಗುವುದು ಒಳ್ಳೆಯದು.

ಧನು
ಬಾಕಿ ಉಳಿದ ಕಾರ್ಯ ಇಂದು ಪೂರೈಸುವಿರಿ.ಹಾಗಾಗಿ ಮನಸ್ಸಿಗೆ ನಿರಾಳತೆ. ಹಣ ಖರ್ಚು ಮಾಡುವಾಗ ಎಚ್ಚರ ವಹಿಸಿ. ದುಂದು ವೆಚ್ಚ ನಿಯಂತ್ರಿಸಿ.

ಮಕರ
ಅನ್ಯರ ಜತೆ ವ್ಯವಹರಿಸುವಾಗ ಎಚ್ಚರ ವಹಿಸಿ. ನಿಮ್ಮನ್ನು ತಮ್ಮ ಸ್ವಾರ್ಥಕ್ಕೆ ಕೆಲವರು ಬಳಸಿಕೊಳ್ಳುವರು. ನಿಮ್ಮ ಹಿತಾಸಕ್ತಿಯನ್ನು ಬಲಿಗೊಡಬೇಡಿ.

ಕುಂಭ
ವೃತ್ತಿ ಮತ್ತು ಖಾಸಗಿ ಬದುಕಲ್ಲಿ ನಿರಾಶೆ ತರುವ ಬೆಳವಣಿಗೆ. ಕೆಲಸದಲ್ಲಿ ಏಕಾಗ್ರತೆ ಕಷ್ಟ. ಪ್ರೀತಿಪಾತ್ರರ ಜತೆ ಜಗಳ ಉಂಟಾದೀತು. ಸಹನೆಯಿಂದ ವರ್ತಿಸಿ.

ಮೀನ
ಆರೋಗ್ಯದ ಬಗ್ಗೆ  ಹೆಚ್ಚು ಗಮನ ಹರಿಸಿ. ಹೊರಗೆ ತಿನ್ನಲು ಹೋಗದಿರಿ. ಕೆಲವು ಪ್ರಮುಖ ವಿಷಯದಲ್ಲಿ  ಗೊಂದಲದ ಮನಸ್ಥಿತಿ ನಿಮ್ಮನ್ನು ಕಾಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!