ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್ ಮದುವೆ ಅದ್ದೂರಿಯಾಗಿ ಇಂದು ನಡೆಯಿತು ಬೆಳಗ್ಗೆ 10:50 ರಿಂದ 11:35 ಸಮಯದ ತುಲಾ ಲಗ್ನದಲ್ಲಿ ಮಾಂಗಲ್ಯ ಧಾರಣೆ ನೆರವೇರಿದೆ. ಗಣ್ಯಾತಿ ಗಣ್ಯರು ಹಾಗೂ ಸಿನಿಮಾ ಗಣ್ಯರು ಆಗಮಿಸಿ ನೂತನ ಜೋಡಿಗೆ ಶುಭಹಾರೈಸಿದ್ದಾರೆ.
ಇದರ ನಡುವೆ ತರುಣ್ ಸುಧೀರ್ ಈ ಮದುವೆಗೆ ಕಾರಣವಾದ ಪ್ರಮುಖ ವ್ಯಕ್ತಿಯನ್ನೇ ಮಿಸ್ ಮಾಡಿಕೊಳ್ಳುತ್ತಿದ್ದರು. ಅವರೇ ನಟ ದರ್ಶನ್..
ಮದುವೆಬಳಿಕ ಮಾತನಾಡಿದ ತರುಣ್ , ಅಂದುಕೊಂಡಂತೆ ಆಗಿದ್ದರೆ ದರ್ಶನ್ ಮುಂದೆ ನಿಂತು ಈ ಜೋಡಿಯ ಮದುವೆ ಮಾಡಬೇಕಿತ್ತು. ಈ ಮದುವೆಗೆ ದರ್ಶನ್ ಬರ್ತಾರೆ ಅನ್ನೋ ಮಾತು ಸುಳ್ಳಾಯಿತು ಹಾಗಾಗಿ ಅವರ ಅನುಪಸ್ಥಿತಿ ಬೇಸರ ತರಿಸಿದೆ ಎಂದಿದ್ದಾರೆ ತರುಣ್ ಸುಧೀರ್.
ಹೊಸ ಜೀವನ ಹೊಸ ಹುರುಪಿದೆ. ಇಷ್ಟು ದಿನ ಕಾದಿದ್ದಕ್ಕೂ ಬೇಸ್ಟ್ ಕೊಟ್ಟಿದಾರೆ ದೇವ್ರು. ತುಂಬಾ ಜನ ಬಂದು ವಿಶ್ ಮಾಡಿದ್ರು ಎಲ್ಲರೂ ತಮ್ಮನ ಥರ ಕುಟುಂಬದ ಥರ ಬಂದು ಹಾರೈಸಿದ್ರು ಎಂದಿದ್ದಾರೆ.
ದರ್ಶನ್ ಅನುಪಸ್ಥಿತಿ ಬಗ್ಗೆಯೂ ಮಾತನಾಡಿದ ತರುಣ್, `ಲಗ್ನ ಪತ್ರಿಕೆ ಬರೆಸುವ ಮುಂಚೆ ಡೇಟ್ ಕನ್ಪರ್ಮ್ ಆಗಿತ್ತು. ಡೇಟ್ ಚೇಂಜ್ ಮಾಡ್ಬೇಡ ಮದ್ವೆ ಮಾಡ್ಕೊ ಅಂದ್ರು ದರ್ಶನ್. ಆಗಸ್ಟ್ 11 ಡೇಟ್ ಕೊಟ್ಟಿದ್ವಿ. ಅವರು ಹೇಳಿದಂತೆ ಮದುವೆ ಆಗ್ತಿದ್ದೇವೆ. ದರ್ಶನ್ ಅವ್ರ ಅನುಪಸ್ಥಿತಿ ಬೇಸರ ಅನ್ನಿಸ್ತಿದೆ’ ಎಂದು ಭಾವುಕರಾದರು ತರುಣ್ ಸುಧೀರ್.