ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಬಿಇಎಲ್ ರಸ್ತೆಯಲ್ಲಿರುವ ಥರ್ಡ್ ವೇವ್ ಕೆಫೆಯ ಬಾತ್‌ರೂಮ್‌ನ ಡಸ್ಟ್‌ಬಿನ್‌ನಲ್ಲಿ ಕ್ಯಾಮೆರಾ ಇಟ್ಟಿದ್ದ ಎಂಪ್ಲಾಯಿಯನ್ನು ಅರೆಸ್ಟ್ ಮಾಡಲಾಗಿದೆ. ಬಾತ್‌ರೂಮ್‌ನಲ್ಲಿದ್ದ ಈತನ ಫೋನ್‌ನಲ್ಲಿ ಎರಡು ಗಂಟೆಗಳಿಂದ ವಿಡಿಯೋ ರೆಕಾರ್ಡ್ ಆನ್‌ನಲ್ಲಿ ಇತ್ತು ಎನ್ನುವ ವಿಷಯ ಹೊರಬಿದ್ದಿದೆ.
ಶಿವಮೊಗ್ಗ ಮೂಲದ 23 ವರ್ಷದ ಮನೋಜ್ ಬಂಧಿತ ಆರೋಪಿ. ಆರೋಪಿ ಮನೋಜ್ ಇದೇ ಕಾಫಿ ಶಾಪ್ನಲ್ಲಿ ಕಾಫಿ ಮೇಕರ್ ಆಗಿ ಕೆಲಸ ಮಾಡುತ್ತಿದ್ದನು. ಬಾತ್‌ರೂಮ್‌ನ ಕಸದ ಬುಟ್ಟಿಗೆ ಹೋಲ್ ಮಾಡಿದ್ದಾನೆ. ನಂತರ ಮೊಬೈಲ್ ಅನ್ನು ಫ್ಲೈಟ್ ಮೂಡ್ಗೆ ಹಾಕಿ ವಿಡಿಯೋ ಚಿತ್ರಕರಣಕ್ಕೆ ಇರಿಸಿ, ಹೊರ ಬಂದು ಯಥಾಪ್ರಕಾರ ತನ್ನ ಕೆಲಸದಲ್ಲಿ ತೊಡಗಿಕೊಂಡಿದ್ದಾನೆ.
ನಂತರ ಶೌಚಾಲಯಕ್ಕೆ ಹೋದ ಮಹಿಳೆಯೊಬ್ಬರು ಮೊಬೈಲ್ ಇರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಕೂಡಲೆ ಸ್ಥಳಕ್ಕೆ ಬಂದ ಸದಾಶಿವನಗರ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿ ಮನೋಜ್ನನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗಿದ್ದು, ಪ್ರತಿಷ್ಠಿತ ಕಾಫಿಡೇಗಳಲ್ಲಿಯೂ ವಾಶ್‌ರೂಮ್‌ಗೆ ಹೋಗೋದಕ್ಕೆ ಜನ ಹೆದರುತ್ತಿದ್ದಾರೆ.