January15, 2026
Thursday, January 15, 2026
spot_img

ವಿಜಯ್‌ ಹಜಾರೆ ಟ್ರೋಫಿ ಸೆಮಿಫೈನಲ್‌: ಕರ್ನಾಟಕ ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟ ವಿದರ್ಭ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯ್‌ ಹಜಾರೆ ಟ್ರೋಫಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡದ ವಿರುದ್ಧ ವಿದರ್ಭ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ 2ನೇ ಬಾರಿಗೆ ಫೈನಲ್‌ ತಲುಪಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡ 49.4 ಓವರ್‌ಗಳಲ್ಲಿ 280 ರನ್‌ಗಳಿಗೆ ಆಲೌಟ್‌ ಆಯಿತು. ಸ್ಪರ್ಧಾತ್ಮಕ ರನ್‌ಗಳ ಗುರಿ ಬೆನ್ನಟ್ಟಿದ ವಿದರ್ಭ ಅಮನ್ ಮೊಖಾಡೆ ಅವರ ಶತಕ, ರವಿಕುಮಾರ್ ಸಮರ್ಥ್‌ ಅವರ ಆಕರ್ಷಕ ಅರ್ಧಶತಕದ ಬ್ಯಾಟಿಂಗ್‌ ನೆರವಿನೊಂದಿಗೆ 46.2 ಓವರ್‌ಗಳಲ್ಲೇ 4 ವಿಕೆಟ್‌ ನಷ್ಟಕ್ಕೆ 284 ರನ್‌ ಬಾರಿಸಿ ಹೆಲುವು ಸಾಧಿಸಿತು.

ವಿದರ್ಭ ತಂಡದ ಮೊದಲನೇ ವಿಕೆಟ್‌ ಅನ್ನು ಬಹುಬೇಗ ಪಡೆದರೂ ಕರ್ನಾಟಕ ಬೌಲರ್‌ಗಳು ನಂತರದ ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡುವಲ್ಲಿ ವಿಫಲರಾದರು. ಧ್ರುವ್‌ ಶೋರೆ 47 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ಇವರು ಅಮನ್‌ ಜೊತೆ 89 ರನ್‌ಗಳ ಜೊತೆಯಾಟವನ್ನು ಆಡಿ ತಂಡಕ್ಕೆ ಭದ್ರ ಅಡಿಪಾಯವನ್ನು ಹಾಕಿದ್ದರು. ಆದರೆ, ಮೂರನೇ ವಿಕೆಟ್‌ಗೆ ಅಮನ್‌ ಹಾಗೂ ಆರ್‌ ಸಮರ್ಥ 147 ರನ್‌ಗಳ ಜೊತೆಯಾಟವನ್ನುಆಡಿದರು. ಈ ಜೋಡಿ ಬೇರ್ಪಡಿಸುವಲ್ಲಿ ಕರ್ನಾಟಕ ಬೌಲರ್‌ಗಳ ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅದ್ಭುತವಾಗಿ ಬ್ಯಾಟ್‌ ಮಾಡಿದ ಅಮನ್‌ ಮೊಖಾಡೆ 122 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 12 ಬೌಂಡರಿಗಳೊಂದಿಗೆ 138 ರನ್‌ ಕಲೆ ಹಾಕಿದರು. ಆ ಮೂಲಕ ವಿದರ್ಭ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Must Read

error: Content is protected !!