October 20, 2026
Tuesday, October 20, 2026
spot_img

ಹೋಳಿ ಆಡಿಕೊಂಡು ಮನೆಗೆ ಬರುವಾಗ ಮರಕ್ಕೆ ಡಿಕ್ಕಿಯಾದ ಟಾಟಾ ಏಸ್‌: ಇಬ್ಬರು ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೋಳಿ ಹಬ್ಬ ಮುಗಿಸಿ ಬರುವ ವೇಳೆ ಟಾಟಾ ಏಸ್‌ ಗೂಡ್ಸ್‌ ವಾಹನವೊಂದು ಮರಕ್ಕೆ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ಗದಗದ ಹರ್ತಿ ಬಳಿ ನಡೆದಿದೆ.

ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದ ನಿವಾಸಿಗಳಾದ ಮುತ್ತಪ್ಪ ಸುಟಗೇರಿ (35), ನಿಂಗಪ್ಪ ಯಳವತ್ತಿ (36) ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇನ್ನುಳಿದ 8 ಜನರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋಜನೂರು ಕಾಮಣ್ಣ ಉತ್ಸವದ ಡಿಜೆ ಮೆರವಣಿಗೆಯಲ್ಲಿ ಭಾಗಿಯಾಗಿ ವಾಪಾಸ್‌ ಬರುವ ವೇಳೆ ಅಪಘಾತ ಸಂಭವಿಸಿದೆ. ಬೆಳಗಿನ ಜಾವದ ವರೆಗೂ ಡ್ಯಾನ್ಸ್‌ ಮಾಡಿ ನಿದ್ದೆ ಮಂಪರಿನಲ್ಲಿ ಗಾಡಿ ಓಡಿಸಿದ್ದೇ ಅಪಘಾತಕ್ಕೆ ಕಾರಣವಾಗಿದೆ.

Must Read