CINE | ಬಾಲಿವುಡ್‌ಗೆ ಹೊರಟು ನಿಂತ ರಾಜ್‌ ಬಿ. ಶೆಟ್ಟಿ, ಬಾಬಿ ಡಿಯೋಲ್‌ ಜೊತೆ ಹೊಸ ಸಿನಿಮಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕನ್ನಡದ ಪ್ರತಿಭಾನ್ವಿತ ನಟ ರಾಜ್ ಬಿ ಶೆಟ್ಟಿಗೆ ಬೇಡಿಕೆ ಹೆಚ್ಚಾಗಿದೆ. ಮಾಲಿವುಡ್ ಬಳಿಕ ಬಾಲಿವುಡ್‌ನಿಂದ  ಕನ್ನಡದ ಈ ನಟನಿಗೆ ಬುಲಾವ್ ಬಂದಿದೆ. ಸ್ಟಾರ್ ನಿರ್ದೇಶಕನ ಸಿನಿಮಾದಲ್ಲಿ ನಟಿಸುವ ಚಾನ್ಸ್ ಸಿಕ್ಕಿದೆ

ಮಮ್ಮುಟ್ಟಿ ಜೊತೆ ನಟಿಸಿ ಫಳಗಿದ ಮೇಲೆ ರಾಜ್ ಬಿ ಶೆಟ್ಟಿಗೆ ಮತ್ತಷ್ಟು ಅವಕಾಶಗಳು ಅರಸಿ ಬರುತ್ತಿವೆ. ಸದ್ಯ ಬಾಲಿವುಡ್ ಡೈರೆಕ್ಟರ್ ಅನುರಾಗ್ ಕಶ್ಯಪ್ ನಿರ್ದೇಶನದಲ್ಲಿ ನಟಿಸಲು ರಾಜ್‌ರನ್ನು ಕೇಳಲಾಗಿದೆ.

ಅವರ ಸಿನಿಮಾದಲ್ಲಿ ಕ್ಯಾಮಿಯೋ ಪಾತ್ರವಾಗಿದ್ರೂ ಅದಕ್ಕೆ ಪ್ರಾಮುಖ್ಯತೆ ಇದ್ದು, ನಟಿಸಲು ರಾಜ್ ಬಿ ಶೆಟ್ಟಿ ಓಕೆ ಎಂದಿದ್ದಾರೆ. ‘ಅನಿಮಲ್‌’ ಖ್ಯಾತಿಯ ನಟ ಬಾಬಿ ಡಿಯೋಲ್  ಜೊತೆ ರಾಜ್‌ ಬಿ ಶೆಟ್ಟಿ ಕಾಣಿಸಿಕೊಳ್ತಿದ್ದಾರೆ. ಸದ್ಯದಲ್ಲೇ ಅನುರಾಗ್ ಕಶ್ಯಪ್ ಸಿನಿಮಾ ಟೈಟಲ್ ಮತ್ತು ತಾರಾಬಳಗದ ಬಗ್ಗೆ ಅವರೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!