ಮಳೆಗಾಲದಲ್ಲಿ ಮಾತ್ರ ಸಿಗುವ ಬಿದಿರಿನ ಚಿಗುರನ್ನು ಮಿಸ್ ಮಾಡದೇ ವರ್ಷಕ್ಕೊಮ್ಮೆಯಾದ್ರೂ ತಿನ್ನಿ. ಯಾಕೆ ಗೊತ್ತಾ?
ಬಿದಿರಿನ ಚಿಗುರುಗಳು ಪ್ರೋಟೀನ್, ಕಾರ್ಬೋಹೈಡ್ರೇಟ್, ಫೈಬರ್ ಮತ್ತು ಖನಿಜಗಳು ಹೇರಳವಾಗಿರುತ್ತದೆ. ಈ ಚಿಗುರುಗಳು ಕೊಬ್ಬು ಮತ್ತು ಸಕ್ಕರೆಯ ಪ್ರಮಾಣ ಕಡಿಮೆಯಿದ್ದು, ಇದು ಮಧುಮೇಹಿಗಳಿಗೆ ಸೂಕ್ತವಾದ ಆಹಾರವಾಗಿದೆ. ನ್ಯೂಟ್ರಾಸ್ಯುಟಿಕಲ್ಸ್ ಎನ್ನುವ ಫೈಬರ್ ಅಂಶ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.
ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಬಿ 6, ಥಯಾಮಿನ್, ರೈಬೋಫ್ಲಾವಿನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ರಂಜಕ, ತಾಮ್ರ, ಸತು, ಮ್ಯಾಂಗನೀಸ್ ಮತ್ತು ಇತರ ಪ್ರಮುಖ ಖನಿಜಗಳು ಕಳಲೆಯಲ್ಲಿ ಸಮೃದ್ಧವಾಗಿದೆ. ಹೀಗಾಗಿ ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕಳಲೆ ಉತ್ತಮ ಆಹಾರವಾಗಿದೆ.