ಚಿಕನ್ ಮತ್ತು ತಾಜಾ ತರಕಾರಕಾರಿಗಳಿಂದ ತಯಾರಾಗುವ Chicken Veggie Rice ಬೆಳಗಿನ ತಿಂಡಿಗೂ, ಲಂಚ್ ಬಾಕ್ಸ್ ಆಗುವ ಒಂದು ಸ್ಪೆಷಲ್ ರೈಸ್ ಐಟಂ. ರುಚಿ, ಪೌಷ್ಟಿಕತೆ ಮತ್ತು ಸುಲಭ ತಯಾರಿ – ಮೂರನ್ನೂ ಒಂದೇ ಪಾತ್ರೆಯಲ್ಲಿ ನೀಡುವ ಈ ವೆಜ್ಜಿ ರೈಸ್ ಎಲ್ಲರಿಗೂ ಇಷ್ಟವಾಗುತ್ತೆ ಖಂಡಿತ.
ಬೇಕಾಗುವ ಸಾಮಗ್ರಿಗಳು:
ಅಕ್ಕಿ – 1 ಕಪ್
ಚಿಕನ್ – 200 ಗ್ರಾಂ
ಕ್ಯಾರೆಟ್ – 1
ಬೀನ್ಸ್ – 6–7
ಬಟಾಣಿ – ¼ ಕಪ್
ಈರುಳ್ಳಿ – 1
ಟೊಮೇಟೋ – 1
ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಹಸಿಮೆಣಸು – 1–2 (ಸ್ಲಿಟ್)
ಗರಂ ಮಸಾಲೆ – ½ ಟೀಸ್ಪೂನ್
ಮೆಣಸು ಪುಡಿ – ½ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಎಣ್ಣೆ ಅಥವಾ ತುಪ್ಪ – 2 ಟೇಬಲ್ ಸ್ಪೂನ್
ನೀರು – 2 ಕಪ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ತಯಾರಿಸುವ ವಿಧಾನ:
ಒಂದು ಪಾತ್ರೆಯಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ. ಅದಕ್ಕೆ ಈರುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ನಂತರ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸು ಸೇರಿಸಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ.
ಇದೀಗ ಚಿಕನ್ ತುಂಡುಗಳನ್ನು ಹಾಕಿ ಮಧ್ಯಮ ಉರಿಯಲ್ಲಿ 5 ನಿಮಿಷ ಹುರಿಯಿರಿ.
ಚಿಕನ್ ಸ್ವಲ್ಪ ಬೇಯುತ್ತಿದ್ದಂತೆ ಟೊಮೇಟೋ, ಉಪ್ಪು, ಗರಂ ಮಸಾಲೆ ಮತ್ತು ಮೆಣಸು ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಟೊಮೇಟೋ ಮೃದುವಾದ ನಂತರ ಎಲ್ಲಾ ತರಕಾರಿಗಳನ್ನು ಸೇರಿಸಿ 2 ನಿಮಿಷ ಮಿಕ್ಸ್ ಮಾಡಿ. ಈಗ ತೊಳೆದ ಅಕ್ಕಿ ಹಾಕಿ ಮಿಶ್ರಣ ಮಾಡಿ. ನೀರು ಸೇರಿಸಿ ಮಧ್ಯಮ ಉರಿಯಲ್ಲಿ ಅಕ್ಕಿ ಬೇಯುವವರೆಗೆ ಬೇಯಿಸಿ.
ಅಕ್ಕಿ ಚೆನ್ನಾಗಿ ಬೆಂದ ನಂತರ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ.


