ತುಂಗಭದ್ರಾ ಜಲಾಶಯ: ಮೂರನೇ ಸ್ಟಾಪ್‌ ಗೇಟ್‌ ಅಳವಡಿಕೆ ಯಶಸ್ವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ತುಂಗಭದ್ರಾ ಜಲಾಶಯದ ಮೂರನೇ ಸ್ಟಾಪ್‌ ಲಾಗ್‌ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ. ಇದರಿಂದ ಜಲಾಶಯದ ಎಲ್ಲಾ 32 ಗೇಟ್‌ಗಳನ್ನು ಸಿಬ್ಬಂದಿ ಬಂದ್ ಮಾಡಿ ನೀರು ಹರಿಯುವುದನ್ನು ನಿಲ್ಲಿಸಿದ್ದಾರೆ.

ಈಗ ಕೇವಲ ಗೇಟ್‌ 19 ರಿಂದ ಅಲ್ಪ ಪ್ರಮಾಣದ ನೀರು ಮಾತ್ರ ಹೊರ ಹೋಗುತ್ತಿದೆ. ಸದ್ಯ 70 ಟಿಎಂಸಿ ನೀರು ಜಲಾಶಯದಲ್ಲಿದೆ. 105 ಟಿಎಂಸಿ ನೀರು ನಿಲ್ಲಿಸಲು ಐದು ಸ್ಟಾಪ್‌ ಗೇಟ್‌ಗಳನ್ನು ಅಳವಡಿಲು ಟಿಬಿ ಬೋರ್ಡ್‌ ಮುಂದಾಗಿದ್ದು ,ಇಂದು ಅಥವಾ ನಾಳೆ ಸಂಪೂರ್ಣ ಗೇಟ್ ಅಳವಡಿಕೆ ಕಾರ್ಯ ಮುಕ್ತಾಯವಾಗಲಿದೆ.

1,633 ಅಡಿ ಎತ್ತರದ ಜಲಾಶಯದಲ್ಲಿ ಈಗ 1625 ಅಡಿ ನೀರು ಸಂಗ್ರಹವಾಗಿದೆ. 105 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈಗ 72 ಟಿಎಂಸಿ ನೀರು ಸಂಗ್ರಹವಾಗಿದೆ. 84,796 ಕ್ಯೂಸೆಕ್ ಒಳಹರಿವು ಇದೆ.

19ನೇ ಕ್ರಸ್ಟ್‌ಗೇಟ್‌ ಕೊಚ್ಚಿ ಹೋಗಿದ್ದರಿಂದ ಒಟ್ಟು ಐದು ಗೇಟ್‌ ಅಳವಡಿಸುವ ಕಾರ್ಯ ಆರಂಭವಾಗಿದೆ. ಶುಕ್ರವಾರ ರಾತ್ರಿ ಮೊದಲ ಸ್ಟಾಪ್‌ಗೇಟ್‌ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!