ಸುಪ್ರಸಿದ್ಧ ಕಪಿಲೇಶ್ವರ ದೇವಸ್ಥಾನಕ್ಕೆ ಇನ್​ಸ್ಟಾಗ್ರಾಮ್​​ ಮೂಲಕ ಬಾಂಬ್​ ಬೆದರಿಕೆ ಸಂದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದುಷ್ಟರಿಗೆ ದೇವರಲ್ಲಿ ಭಯವಾಗಲೀ ಭಕ್ತಿಯಾಗಲೀ ಇರುವುದಿಲ್ಲ. ಬೆಳಗಾವಿ ಪುರಾಣ ಪ್ರಸಿದ್ಧ ಕಪಿಲೇಶ್ವರ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ ಸಂದೇಶ ನೀಡಲಾಗಿದೆ.

ಮುಂದೊಂದು ದಿನ ಕಪಿಲೇಶ್ವರ ದೇವಸ್ಥಾನವನ್ನು ಸ್ಫೋಟಿಸುತ್ತೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆಗಸ್ಟ್ 12ರಂದು Marvelous belgaum ಎಂಬ ಹೆಸರಿನ ಇನ್ ಸ್ಟಾಗ್ರಾಂ ಖಾತೆದಾರ ರಾಕೇಶ್ ನಂದಗಡ ಎಂಬುವವರು ಕಪಿಲೇಶ್ವರ ದೇವಸ್ಥಾನದ ಪಲ್ಲಕ್ಕಿ ಉತ್ಸವದ ಸ್ಟೋರಿ ಹಂಚಿಕೊಂಡಿದ್ದರು. ಈ ಸ್ಟೋರಿ ನೋಡಿದ ಇಲಾಯತ್ ಎಂಬ ಹೆಸರಿನ ಇನ್ ಸ್ಟಾಗ್ರಾಂ ಖಾತೆದಾರ ರಿಪ್ಟ್ ಮಾಡಿದ್ದು, ಮಾಷಾ ಅಲ್ಲಾ ಇಲ್ಲಿ ಬಾಂಬ್​ ಹಾಕ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ಇದನ್ನು ಗಮನಿಸಿದ ರಾಕೇಶ್ ನಂದಗಡ ಅವರು ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here