ದಿಗಂತ ವರದಿ ಕೊಪ್ಪಳ:
ರಾಜ್ಯಪಾಲರು ಪ್ರಾಸುಕ್ಯೂಷನ್ ಗೆ ಅನುಮತಿ ನೀಡಿದರೆ ಹಾಗೂ ಅಗತ್ಯ ಬಿದ್ದರೆ ಮುಲಾಜಿಲ್ಲದೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತ್ರ ವಲ್ಲ ಯಾರೇ ಇದ್ದರೂ ಅವರನ್ನು ಬಂಧಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಸಾಪುರ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಯಾರನ್ನೇ ಆಗಲಿ ಬಂಧಿಸುವ ಪ್ರಸಂಗ ಬಂದರೆ ಖಂಡಿತ ಬಂಧಿಸಲಾಗುವುದು. ಅದರಲ್ಲಿ ಯಾವುದೇ ಮೂಲಾಜಿಲ್ಲ. ಸದ್ಯ ಅಂಥ ಪರಿಸ್ಥಿತಿ ಇಲ್ಲ. ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ವಿರುದ್ಧ ಗಣಿ ಹಗರಣ ಆರೋಪ ಇದೆ. ಲೋಕಾಯುಕ್ತದವರು ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ್ದಾರೆ. ಎರಡು ಬಾರಿ ಪತ್ರ ಬರೆದರೂ ಗೌರ್ನರ್ ನಿರ್ಲಕ್ಷಿಸಿದ್ದಾರೆ ಎಂದರು.