RELATIONSHIP | ನಿಮ್ಮ ಸಂಬಂಧ ಸ್ಟ್ರಾಂಗ್‌ ಆಗ್ತಾ ಇದ್ಯಾ? ಈ ಲಕ್ಷಣಗಳಿವೆಯಾ ನೋಡಿ..

ಯಾವುದೇ ಒಂದು ಸಂಬಂಧದ ಶುರುವಿನಲ್ಲಿ ಎಲ್ಲವೂ ಅದ್ಭುತವಾಗಿಯೇ ಇರುತ್ತದೆ. ಆಕೆ ಅಥವಾ ಅವನು ಏನು ಮಾಡಿದರೂ ಚೆನ್ನ. ಇನ್ನು ಸ್ವಲ್ಪ ಮುನಿಸಿಗೂ ಕಣ್ಣೀರು, ಎರಡು ದಿನ ಮಾತುಕತೆ ಕಟ್‌, ನಂತರ ಇನ್ನಷ್ಟು ಪ್ರೀತಿ.. ನಿಮ್ಮ ಸಂಬಂಧ ಯಾವ ಕಡೆ ಹೋಗ್ತಾ ಇದೆ? ಸ್ಟ್ರಾಂಗ್‌ ಆಗಿ ಮೂಡಿ ಬರ್ತಿದ್ಯಾ ಅಥವಾ ಬಿದ್ದು ಹೋಗ್ತಾ ಇದೆಯಾ? ಸ್ಟ್ರಾಂಗ್‌ ಆಗಿದ್ರೆ ರಿಲೇಷನ್‌ಶಿಪ್‌ ಈ ರೀತಿ ಕಾಣುತ್ತದೆ..

ನಿಮ್ಮ ಪಾರ್ಟ್‌ನರ್‌ ನಿಮ್ಮ ಜೊತೆ ಇಲ್ಲದಾಗ್ಲೂ ಅವರ ಬಗ್ಗೆಯೇ ಚಿಂತೆ ಮಾಡ್ತೀರಿ, ಆಗಾಗ ಕಾಲ್‌ ಮೆಸೇಜ್‌ ಮಾಡಿ ವಿಚಾರಿಸ್ತೀರಿ.

ಯಾರಾದರೂ ಗುಡ್‌ನ್ಯೂಸ್‌ ಹೇಳಿದರೆ ಸಖತ್‌ ಖುಷಿ ಪಡ್ತೀರಿ, ಅವರ ಏಳಿಗೆಯಿಂದ ನಿಮಗೆ ಸಮಾಧಾನ ಸಿಗುತ್ತದೆ. ಜೆಲಸಿ ಇಲ್ಲ.

ಯಾವಾಗಲೂ ಅಂಟಿಕೊಂಡು ಇರಬೇಕು ಅಂತಿಲ್ಲ. ನಿಮ್ಮ ಬೇರೆ ಸ್ನೇಹಿತರ ಜೊತೆಯೂ ಆರಾಮಾಗಿ ಇರುತ್ತೀರಿ. ಅದು ನಿಮ್ಮ ಪಾರ್ಟ್‌ನರ್‌ಗೆ ಕಿರಿಕಿರಿ ಮಾಡೋದಿಲ್ಲ.

ಇಬ್ಬರ ಸೆನ್ಸ್‌ ಆಫ್‌ ಹ್ಯೂಮರ್‌, ಮಾತುಕತೆ, ನಡೆನುಡಿ ಒಂದೇ ರೀತಿ ಆಗುತ್ತದೆ. ನಿಮ್ಮ ಜೋಕ್ಸ್‌ ನಿಮಗೆ ಮಾತ್ರ ನಗು ತರಿಸುತ್ತದೆ.

ಮನೆಕೆಲಸ ಅಥವಾ ಯಾವುದೇ ಕೆಲಸ ಆದ್ರೂ ಇಬ್ಬರೂ ಡಿವೈಡ್‌ ಮಾಡಿಕೊಳ್ಳೋಕೆ ಇಷ್ಟಪಡ್ತೀರಿ. ಒಬ್ಬರಿಗೇ ಬರ್ಡನ್‌ ಆಗೋದಕ್ಕೆ ಬಿಡೋದಿಲ್ಲ.

ಹೊಸ ಹೊಸ ವಿಷಯಗಳನ್ನು ಟ್ರೈ ಮಾಡೋದಕ್ಕೆ ಇಷ್ಟಪಡ್ತೀರಿ. ಒಟ್ಟಿಗೇ ಮಾಡುವ ಹಾಬಿಗಳನ್ನು ಬೆಳೆಸಿಕೊಳ್ತೀರಿ.

ನಿಮ್ಮ ರಿಲೇಷನ್‌ಶಿಪ್‌ನಲ್ಲಿ ಎಕ್ಸ್ಟ್ರೀಮ್‌ ಎನ್ನುವಂಥ ಅಪ್ಸ್‌ ಹಾಗೂ ಡೌನ್ಸ್‌ ಇರೋದಿಲ್ಲ. ಒಂದೇ ರೀತಿ ಸಂಬಂಧ ನಡೆದುಹೋಗುತ್ತದೆ.

ಜಗಳ ಆಡೇ ಆಡ್ತೀರಿ, ಬಟ್‌ ಜಗಳದಿಂದ ಹೇಗೆ ರಿಕವರ್‌ ಆಗ್ಬೇಕು ಅನ್ನೋದು ಚೆನ್ನಾಗಿ ಗೊತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!