ಹೊಸದಿಗಂತ ವರದಿ ,ಕಲಬುರಗಿ:
ಕಲಬುರಗಿ ನಗರದ ನೂತನ ಪೊಲೀಸ್ ಆಯುಕ್ತರಾಗಿ 2009ನೇ ಬ್ಯಾಚಿನ್ ಐ.ಪಿ.ಎಸ್. ಅಧಿಕಾರಿ ಡಾ.ಶರಣಪ್ಪ ಎಸ್.ಡಿ ಅವರು ಶುಕ್ರವಾರ ಪೊಲೀಸ್ ಭವನದಲ್ಲಿ ಅಧಿಕಾರ ಸ್ವೀಕರಿಸಿದರು.
ರೈಲ್ವೆ ಡಿ.ಐ.ಜಿ ಅಗಿದ್ದ ಇವರನ್ನು ಮಂಗಳವಾರವಷ್ಟೆ ಸರ್ಕಾರ ಕಲಬುರಗಿ ನಗರ ಪೊಲೀಸ್ ಆಯುಕ್ತರನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.