ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ನಟಿ ತಾಪ್ಸಿ ಪನ್ನು ಟ್ರೋಲಿಗರ ಮೇಲೆ ಗರಂ ಆಗಿದ್ದಾರೆ. ಸಂರ್ದಶನವೊಂದರಲ್ಲಿ ನಾನು ಪಬ್ಲಿಕ್ ಫಿಗರ್, ಹಾಗಂತ ಸಾರ್ವಜನಿಕರ ಆಸ್ತಿಯಲ್ಲ ಎಂದು ಹೇಳಿದ್ದಾರೆ.
ಏನು ಮಾಡಿದರೂ ಅಥವಾ ಮಾಡದೇ ಇದ್ದರೂ ಟ್ರೋಲ್ಗೆ ಒಳಗಾಗುತ್ತೇನೆ. ಇದನ್ನು ಜೀವನದಲ್ಲಿ ತಡವಾಗಿ ಅರಿತುಕೊಂಡೆ ಎಂದು ಮಾತನಾಡಿದ್ದಾರೆ. ನಾನು ಸೆಲೆಬ್ರಿಟಿ ನಿಜ. ಆದರೆ ಸಾರ್ವಜನಿಕರ ಆಸ್ತಿಯಲ್ಲ ಎಂದು ಟ್ರೋಲಿಗರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಈ ಎರಡರ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಗೌರವ ಕೊಟ್ಟು ಪಡೆದುಕೊಳ್ಳಬೇಕು. ನನ್ನ ಮೈ ಮೇಲೆ ಬೀಳುವುದು ಸರಿಯಲ್ಲ ಎಂದು ಮಾತನಾಡಿದ್ದಾರೆ.