ಪತ್ನಿ, ಮಗುವಿನ ಎದುರೇ NRI ಪ್ರಜೆಯನ್ನು ಶೂಟೌಟ್‌ ಮಾಡಿದ ದುಷ್ಕರ್ಮಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕಾದಿಂದ ಕೆಲವೇ ದಿನಗಳ ಹಿಂದೆ ಸ್ವದೇಶಕ್ಕೆ ಮರಳಿದ್ದ ಎನ್‌ಆರ್‌ಐ(NRI) ಪ್ರಜೆಯನ್ನು ಗುಂಡಿಕ್ಕಿರುವ ಭೀಕರ ಘಟನೆ ಪಂಜಾಬ್‌ನಲ್ಲಿ ನಡೆದಿದೆ.

ಅಮೃತಸರದ ದಬುರ್ಜಿ ಪ್ರದೇಶದಲ್ಲಿ ಈ ಭೀಕರ ಘಟನೆ ನಡೆದಿದ್ದು, ಸುಖಚೈನ್ ಸಿಂಗ್ ಎಂಬ ಎನ್‌ಆರ್‌ಐ ಅವರನ್ನು ಅವರ ಪತ್ನಿ ಮತ್ತು ಮಗುವಿನ ಎದುರೇ ಕೊಲೆಮಾಡಿದ್ದಾರೆ. ಇನ್ನು ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದೆ.

ಬೈಕ್‌ನಲ್ಲಿ ಬಂದಿದ್ದ ಇಬ್ಬರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಸುಖಚೈನ್ ಸಿಂಗ್ ಅವರ ನಿವಾಸಕ್ಕೆ ನುಗ್ಗಿ ಅವರ ಪತ್ನಿ ಮತ್ತು ಮಗುವಿನ ಎದುರೇ ಗುಂಡು ಹಾರಿಸಿದ್ದಾರೆ. ಈ ವೇಳೆ ಸುಖಚೈನ್ ಸಿಂಗ್ ಅವರನ್ನು ಬಿಟ್ಟುಬಿಡುವಂತೆ ಅವರ ಪತ್ನಿ ಮತ್ತು ಮಗು ಎಷ್ಟೇ ಬೇಡಿಕೊಂಡರೂ ಕೇಳದೇ ಶೂಟ್‌ ಮಾಡಿದ್ದಾರೆ .

https://x.com/RealBababanaras/status/1827282134635311426?ref_src=twsrc%5Etfw%7Ctwcamp%5Etweetembed%7Ctwterm%5E1827282134635311426%7Ctwgr%5Efa3116dc9cbba3c33f8ed25a44fcd0e029e1c447%7Ctwcon%5Es1_&ref_url=https%3A%2F%2Fvistaranews.com%2Fnational%2Fpanjab-shoot-out-nri-shot-at-in-front-of-wife-and-son-in-amritsar-assailants-flee-as-gun-jams%2F720517.html

ಇನ್ನು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರವ ಸಿಂಗ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಯ ನಂತರ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಶಸ್ತ್ರಸಜ್ಜಿತ ದಾಳಿಕೋರರು ಸಿಂಗ್ ಅವರ ಕಾರಿನ ನೋಂದಣಿ ಪ್ರಮಾಣಪತ್ರದ ಬಗ್ಗೆ ವಿಚಾರಿಸುವ ನೆಪದಲ್ಲಿ ಬಂದು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ಸಿಂಗ್ ಅವರ ಕುಟುಂಬ ಸದಸ್ಯರು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ದಾಳಿಯ ಹಿಂದೆ ಸಿಂಗ್ ಅವರ ಮೊದಲ ಪತ್ನಿಯ ಕುಟುಂಬದ ಕೈವಾಡವಿದೆ ಎಂದು ಅವರ ತಾಯಿ ಹೇಳಿದ್ದಾರೆ. ಈ ವಿಚಾರದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಅಮೃತಸರ ಪೊಲೀಸ್ ಆಯುಕ್ತರಿಗೆ ಸರ್ಕಾರ ಸೂಚಿಸಿದೆ. ಸುಖಚೈನ್ ಸಿಂಗ್ ಅವರ ಕುಟುಂಬವು ಅವರ ಮಾಜಿ ಪತ್ನಿಯ ಐದು ಕುಟುಂಬದ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!