ಹೊಸದಿಗಂತ ಡಿಜಿಟಲ್ ಡೆಸ್ಕ್;
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ನಲ್ಲೇ ಟ್ರಾಲಿ ಆಪರೇಟರ್ ಗೆ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಪತ್ನಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಅನುಮಾನದ ಮೇಲೆ ಟ್ರಾಲಿ ಆಪರೇಟರ್ ಮರ್ಡರ್ ಮಾಡಲಾಗಿದೆ.
ರಮೇಶ್ ಎಂಬ ವ್ಯಕ್ತಿಯ ಪತ್ನಿಗೆ ಟ್ರಾಲಿ ಆಪರೇಟರ್ ಮೆಸೇಜ್ ಮಾಡುತ್ತಿದ್ದ. ಅವರ ನಡುವೆ ಅಕ್ರಮ ಸಂಬಂಧದ ಶಂಕೆಯಿಂದ ಚಾಕು ಸಮೇತ ಕೆಂಪೇಗೌಡ ಏರ್ ಪೋರ್ಟ್ ಗೆ ಬಂದಿದ್ದ ರಮೇಶ್ ಮಾತನಾಡಬೇಕಿದೆ ಎಂದು ಟರ್ಮಿನಲ್ ಹೊರ ಆವರಣಕ್ಕೆ ಕರೆದು ಟ್ರಾಲಿ ಆಪರೇಟರ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ರಮೇಶ್ ನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.