ಹೊಸದಿಗಂತ ವರದಿ,ಕುಣಿಗಲ್:
ಪ್ರೇಮ ನಿರಾಕರಣೆ ಮಾಡಿದ ತೃತೀಯಲಿಂಗಿಗೆ ಯುವಕನೊಬ್ಬ ಸಾರ್ವಜನಿಕ ಸ್ಥಳದಲ್ಲಿ ಚಾಕುವಿನಿಂದ ಇರಿದು ಪರಾರಿಯಾಗುತ್ತಿದ್ದು, ಸಾರ್ವಜನಿಕರು ಸಿನಿಮಿಯ ರೀತಿಯಲ್ಲಿ ಬೆನ್ನತ್ತಿ ಹಿಡಿದು ಥಳಿಸಿ ಪೊಲೀಸರ ವಶಕ್ಕೆ ನೀಡಿದ ಘಟನೆ ಬುಧವಾರ ರಾತ್ರಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಕೋಟೆ ಪ್ರದೇಶದ ತೃತೀಯ ಲಿಂಗಿಗೂ, ಮಂಡ್ಯದ ಯುವಕ ಆದೀಲ್ ಕಳೆದ ಆರುತಿಂಗಳಿಂದ ಪ್ರೀತಿಸುತ್ತಿದ್ದು, ತೃತೀಯ ಲಿಂಗಿ ಕಾರ್ಯನಿಮಿತ್ತ ಹೊರ ಊರುಗಳಿಗೆ ಹೋಗುತ್ತಿದ್ದು, ಇದನ್ನು ಸಹಿಸದ ಪ್ರೇಮಿ ಆಕ್ಷೇಪ ವ್ಯಕ್ತಪಡಿಸಿ ಹಲ್ಲೆ ನಡೆಸುತ್ತಿದ್ದನು. ಇದರಿಂದ ಬೇಸತ್ತು ಪ್ರೀತಿ ನಿರಾಕರಿಸಿದ್ದು, ಈ ಹಿನ್ನೆಲೆ ಆದೀಲ್ ಮಾತನಾಡುವ ಬಯಕೆ ವ್ಯಕ್ತಪಡಿಸಿ, ಮಂಡ್ಯದಿಂದ ಬುಧವಾರ ಸಂಜೆ ಕುಣಿಗಲ್ ಗೆ ಬಂದಿದ್ದನು.
ಗ್ರಾಮದೇವತಾ ವೃತ್ತದ ಬಳಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಅಸಮಾಧಾನಗೊಂಡಿದ್ದ ಆದೀಲ್, ತೃತೀಯ ಲಿಂಗಿಗೆ ಚಾಕುವಿನಿಂದ ಇರಿದು ಪರಾರಿಯಾಗುತ್ತಿದ್ದಾನೆ.
ಈ ವೇಕೆ ಪುರಸಭೆ ಸದಸ್ಯ ರಂಗಸ್ವಾಮಿ ಮತ್ತು ಬೆಂಬಲಿಗರು ಆರೋಪಿಯನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.