ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಆರೋಪಿ ದರ್ಶನ್ ಮತ್ತು ಆತನ ತಂಡದ ಸದಸ್ಯರನ್ನು ಪರಪಣ್ಣ ಅಗ್ರಹಾರದಿಂದ ಮತ್ತೊಂದು ಕಾರಾಗೃಹಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಮುಂಜಾನೆ 4 ಗಂಟೆಗೆ ಆರಂಭವಾಗಿದೆ.
ದರ್ಶನ್ ಅವರನ್ನು ಬುಧವಾರ ಶಿರಾ ಮಾರ್ಗವಾಗಿ ಬಳ್ಳಾರಿ ಜೈಲಿಗೆ ಕರೆದೊಯ್ಯಲಾಗುತ್ತದೆ ಎಂಬ ಮಾಹಿತಿ ಇತ್ತು, ಇಂದು ಚಿಕ್ಕಬಳ್ಳಾಪುರ, ಅನಂತಪುರ, ಬಾಗೆಪಲ್ಲಿ ಮಾರ್ಗವಾಗಿ ಬಳ್ಳಾರಿಗೆ ಕರೆದೊಯ್ಯಲಾಗುತ್ತದೆ.
ಎಸಿಪಿ ಭರತ್ ರೆಡ್ಡಿ ನೇತೃತ್ವದಲ್ಲಿ ಮೂರು ಪೊಲೀಸ್ ವಾಹನಗಳ ಭದ್ರತೆಯಲ್ಲಿ ದರ್ಶನ್ ತೆರಳುತ್ತಿದ್ದಾರೆ. ಪರಪ್ಪನ ಅಗ್ರಹಾರದಿಂದ ಹೊರಟ ವಾಹನ ಮೇಕ್ರಿ ವೃತ್ತ, ಹೆಬ್ಬಾಳ ರಸ್ತೆ, ಯಲಹಂಕ, ಚಿಕ್ಕಬಳ್ಳಾಪುರ ಮಾರ್ಗವಾಗಿ ಬಳ್ಳಾರಿಯತ್ತ ದರ್ಶನ್ ಅವರನ್ನು ಬಿಗಿ ಭದ್ರತೆಯಲ್ಲಿ ಕರೆದೊಯ್ಯಲಾಯಿತು.
ದರ್ಶನ್ ಅವರ ವಾಹನವು ಬಾಗೇಪಲ್ಲಿ ತಾಲ್ಲೂಕಿನ ನಾರೇಪಲ್ಲಿ ಟೋಲ್ ಪ್ಲಾಜಾ ಮೂಲಕ ಬೆಳಿಗ್ಗೆ 6:40 ಕ್ಕೆ ಆಂಧ್ರಪ್ರದೇಶವನ್ನು ಪ್ರವೇಶಿಸಿತು. ದರ್ಶನ್ ಅವರನ್ನು ಅನಂತಪುರ, ಗುಂತಕಲ್, ಮಂತ್ರಾಲಯ ಮಾರ್ಗವಾಗಿ ಬಳ್ಳಾರಿಗೆ ಕರೆತರುವ ಸಾಧ್ಯತೆ ಇದೆ.