ಇದ್ದಕ್ಕಿದ್ದಂತೆ ಹೆಚ್ಚಾಯ್ತು ಈರುಳ್ಳಿ ರೇಟ್‌, ಮಿಡಲ್‌ ಕ್ಲಾಸ್‌ ಜನರ ಕಣ್ಣಲ್ಲಿ ಮತ್ತೆ ನೀರು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಅತಿಯಾದ ಮಳೆಯಿಂದಾಗಿ ಬೆಳ್ಳುಳ್ಳಿ, ಈರುಳ್ಳಿ ಬೆಲೆ ಗಗನಕ್ಕೇರಿದೆ.

ಧಾರಾಕಾರ ಮಳೆಯಿಂದಾಗಿ ಕೆಲವೆಡೆ ಬೆಳೆ ನಾಶವಾಗಿದ್ದರಿಂದ ಸದ್ಯ ಬೆಳ್ಳುಳ್ಳಿಯ ಬೆಲೆ ಪ್ರತಿ ಕೆ.ಜಿಗೆ 400 ರೂಪಾಯಿ ಇದೆ. ಜೊತೆಗೆ ನಿರಂತರ ಮಳೆ ಸುರಿದಿದ್ದರಿಂದ ಕೊಳೆ ರೋಗ ಬಂದು ಈರುಳ್ಳಿ ಇಳುವರಿ ಕಡಿಮೆಯಾದ ಪರಿಣಾಮ ಸದ್ಯ ಬೆಲೆ ಹೆಚ್ಚು ಆಗಿದ್ದು ಕೆ.ಜಿಗೆ 60 ರೂಪಾಯಿ ಇದೆ. ಕೊಳೆ ರೋಗದಿಂದಲೇ ಕರ್ನಾಟಕದಲ್ಲಿ ಈರುಳ್ಳಿ ಇಳುವರಿ ಕುಸಿದಿದೆ. ಬೆಲೆ ಹೆಚ್ಚು ಆಗಲು ಇದೇ ಕಾರಣವಾಗಿದೆ. ರಾಜ್ಯದ ಮಾರ್ಕೆಟ್​ಗಳಲ್ಲಿ ಮಹಾರಾಷ್ಟ್ರದ ಈರುಳ್ಳಿಯ ದರ್ಬಾರ್ ಜೋರಾಗಿದೆ.

ಯಶವಂತಪುರ- ದಾಸನಪುರ ಮಾರ್ಕೆಟ್​ಗೆ 127 ಈರುಳ್ಳಿ ಲಾರಿ ಪೈಕಿ 20 ಮಾತ್ರ ಕರ್ನಾಟಕದ ಲಾರಿಗಳು ಆಗಿವೆ. ಚಿತ್ರದುರ್ಗದ ಕಡಯಿಂದ ಮಾತ್ರ ಇವು ಬರುತ್ತಿವೆ. ಉತ್ತರ ಕರ್ನಾಟಕದ ಈರುಳ್ಳಿ ಮಾರ್ಕೆಟ್​ಗೆ ಬರಲು ಇನ್ನೂ ತಿಂಗಳು ಬೇಕು. ಉತ್ತರ ಕರ್ನಾಟಕದಲ್ಲೂ ಅತಿಯಾದ ಮಳೆ ಹಿನ್ನೆಲೆಯಲ್ಲಿ ಇಳುವರಿ ಕುಸಿತವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಇನ್ನಷ್ಟು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಮಧ್ಯ ಮಪ್ರದೇಶ ಮತ್ತು ರಾಜಸ್ಥಾನದಲ್ಲಿ ಭಾರೀ ಮಳೆಯಿಂದಾಗಿ ಇಳುವರಿ ಕಡಿಮೆ ಆಗಿದ್ದು ಕರ್ನಾಟಕಕ್ಕೆ ಬರುವ ಬೆಳ್ಳುಳ್ಳಿ ಕಡಿಮೆಯಾಗಿದೆ. ಈಗ 400 ರೂಪಾಯಿ ಇರುವ ಬೆಳ್ಳುಳ್ಳಿ ಬೆಲೆ 500 ರೂಪಾಯಿ ದಾಟುವ ನಿರೀಕ್ಷೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!