ಹೊಸ ದಿಗಂತ ವರದಿ,ಹುಬ್ಬಳ್ಳಿ:
ಮಂಟೂರ ರಸ್ತೆಯಲ್ಲಿ ನಡೆದ ಮಲ್ಲಿಕ್ ಜಾನ್ ಹತ್ಯೆ ಮಾಡಿದ ಪ್ರಮುಖ ಆರೋಪಿಗಳನ್ನು ನಗರದ ಸಬ್ ಜೈಲ್‌ನಿಂದ ಬೇರೆ ಜಿಲ್ಲೆಗಳ ಸಬ್ ಜೈಲ್‌ಗೆ ಶುಕ್ರವಾರ ಸ್ಥಳಾಂತರಿಸಲಾಯಿತು.
ಆರೋಪಿಗಳಾದ ಬಾಲರಾಜ ಅಲಿಯಾಸ ಬಂಗಾರ ಬಾಲ್ಯಾನನ್ನು ಕಲಬುರಗಿ ಹಾಗೂ ಪ್ರಜ್ವಾಲ್ ಎಂಬಾತನನ್ನು ವಿಜಯಪುರ ಜಿಲ್ಲೆಗೆ ಸ್ಥಳಾಂತರ ಮಾಡಲಾಗಿದೆ.
ಈ ವೇಳೆ ಆರೋಪಿಗಳಿಬ್ಬರೂ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಇಲ್ಲಿಂದ ನಮನ್ನು ಸ್ಥಳಾಂತರಿಸಬೇಡಿ ಎಂದು ತಕಾರರು ತೆಗೆದ ಹಿನ್ನೆಲೆ ಸಬ್ ಜೈಲಿನಲ್ಲಿ ಕೆಲಹೊತ್ತು ಬೀಗುವಿನ ವಾತಾವರಣ ನಿರ್ಮಾಣವಾಗಿತ್ತು.
ಬಳಿಕ ಹೆಚ್ಚಿನ ಸಿಬ್ಬಂದಿಯನ್ನು ಕರೆಸು ಮೂಲಕ ಬಿಗಿ ಭದ್ರತೆಯಲ್ಲಿ ಅಲ್ಲಿಂದ ಇಬ್ಬರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲ್ಲಿಕ್‌ಜಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿಯವರೆಗೆ ೧೮ ಜನ ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ.


