ಹೊಸದಿಗಂತ ಡಿಜಿಟಲ್ ಡೆಸ್ಕ್:
‘ನನ್ನ ಟೈಂ, ನನ್ನ ಗ್ರಹಚಾರ ಸರಿಯಿಲ್ಲ ಅಷ್ಟೇ’ ಇದು ನಟ ದರ್ಶನ್ ಆಡಿರುವ ಪಶ್ಚಾತ್ತಾಪದ ಮಾತು ಎನ್ನಲಾಗಿದೆ.
ಬೆಂಗಳೂರಿನ ಪರಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಐದು ಗಂಟೆಗಳ ಪ್ರಯಾಣದ ವೇಳೆ ದರ್ಶನ್ ಪೊಲೀಸರ ಮುಂದೆ ತಮ್ಮ ಸಿನಿಮಾ ಪಯಣವನ್ನು ವಿವರಿಸಿದರು. ರೇಣುಕಾಸ್ವಾಮಿ ಹತ್ಯೆಯ ನಂತರದ ಬೆಳವಣಿಗೆಗಳ ಬಗ್ಗೆ ಮಾತನಾಡುವಾಗ ದರ್ಶನ್ ಭಾವುಕರಾದರು ಎಂದು ಮೂಲಗಳು ತಿಳಿಸಿವೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಈಗ ಏನೇ ಹೇಳಿದರೂ ತಪ್ಪಾಗುತ್ತದೆ. ಕಾನೂನಿನ ಪ್ರಕಾರ ಎಲ್ಲದಕ್ಕೂ ಹೋರಾಟ ಮಾಡುತ್ತೇನೆ ಎಂದು ದರ್ಶನ್ ಹೇಳಿದ್ದಾರೆ.