ಹೊಸ ದಿಗಂತ ವರದಿ, ರಾಯಚೂರು :
ಕ್ರೇನ್ ವಾಹನ ಹರಿದು ಸ್ಥಳದಲ್ಲಿಯೇ ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ನಗರದ ರೈಲ್ವೆ ನಿಲ್ದಾಣ ಕ್ರಾಸ್ ಬಳಿ ಶುಕ್ರವಾರ ನಡೆದಿದೆ.
ನಗರದ ಸತ್ಯಸಾಯಿ ನಗರ ವಾಸಿಯಾಗಿರುವ ವಿಕಲಚೇತನೆ ಆಗಿದ್ದ ಈರಮ್ಮ ಎಂದು ಗುರುತಿಸಲಾಗಿದೆ. ಈರಮ್ಮ ಹಾಗೂ ಇವರ ತಾಯಿ ರಸ್ತೆ ದಾಟುತ್ತಿದ್ದರು. ಈ ಸಂದರ್ಭದಲ್ಲಿ ತಾಯಿ ರಸ್ತೆ ದಾಟಿದ್ದಾರೆ. ಈರಮ್ಮ ವಿಕಲಚೇತನೆ ಆಗಿದ್ದರಿಂದ ಮೆಲ್ಲಗೆ ರಸ್ತೆ ದಾಡುತ್ತಿರುವ ಸಂದರ್ಭದಲ್ಲಿ ಕ್ರೇನ್ ವಾಹನ ಇವರ ಮೇಲೆ ಹರಿದು ಪರಿಣಾಮ ತ್ರೀವವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಪ್ರಕರಣ ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತನಿಖೆ ಮುಂದುವರೆದಿದೆ.


