September 26, 2026
Saturday, September 26, 2026
spot_img

ಅಡ್ರಸ್‌ ಕೇಳೋ ನೆಪದಲ್ಲಿ ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಅತ್ಯಾಚಾರ, ಒಂದು ದಿನದಲ್ಲೇ ಆರೋಪಿ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಡ್ರಸ್‌ ಕೇಳೋ ನೆಪದಲ್ಲಿ ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಒಂದೇ ದಿನದಲ್ಲಿ ಅರೆಸ್ಟ್‌ ಮಾಡಲಾಗಿದೆ.

ತುಮಕೂರು ಜಿಲ್ಲೆಯ ಗುಬ್ಬಿ ಗ್ರಾಮದಲ್ಲಿ ಶನಿವಾರ ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ವಿದ್ಯಾರ್ಥಿನಿ ಬಳಿ ಬಂದು ಅಡ್ರಸ್‌ ಕೇಳಿದ್ದಾನೆ. ಸೈಕಲ್‌ನಲ್ಲಿದ್ದ ಆಕೆಗೆ ಅಡ್ರಸ್‌ ತೋರಿಸು ಎಂದು ಹೇಳಿದ್ದು, ಬಾಲಕಿ ರಸ್ತೆ ತೋರಿಸಲು ಕರೆದುಕೊಂಡು ಹೋಗಿದ್ದಾಳೆ.

ಆಚೆ ಈಚೆ ಯಾರೂ ಇಲ್ಲದನ್ನು ಕಂಡ ವ್ಯಕ್ತಿ ಆಕೆಯ ಮೇಲೆ ಕೆರೆ ಏರಿಯ ಬಳಿ ಅತ್ಯಾಚಾರ ಎಸಗಿದ್ದಾನೆ. ನಂತರ ಮನೆಗೆ ಬಂದು ಪೋಷಕರಿಗೆ ವಿದ್ಯಾರ್ಥಿ ನಡೆದಿದ್ದನ್ನು ಹೇಳಿದ್ದಾಳೆ.

ತಕ್ಷಣವೇ ಪೊಲೀಸರು ಹುಡುಕಾಟ ಆರಂಭಿಸಿದ್ದು, ಆರೋಪಿಯನ್ನು ಅರೆಸ್ಟ್‌ ಮಾಡಿದ್ದಾರೆ. ಬಾಲಕಿಗೆ ಚಿಕಿತ್ಸೆ ಕೊಡಿಸಲಾಗಿದೆ.



Must Read