ಹೊಸ ದಿಗಂತ ವರದಿ, ಉಳ್ಳಾಲ
ಕರಾವಳಿಯ ಕಾರಣೀಕ ಕ್ಷೇತ್ರವಾದ ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಬಾಲಿವುಡ್ ನಟರಾದ ಸುನೀಲ್ ಶೆಟ್ಟಿ ಅವರು ಶುಕ್ರವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಂಗಳೂರಿಗೆ ಯಾರು ಬಂದರು ಕೊರಗಜ್ಜನ ಕ್ಷೇತ್ರಕ್ಕೆ ಬಂದೇ ಬರ್ತಾರೆ.ಯಾರೇ ಬಂದರೂ ಕೊರಗಜ್ಜ ಅವರ ಬಯಕೆಗಳನ್ನು ಈಡೇರಿಸುತ್ತಾರೆ.ನನ್ನ ಮಗ,ಮಗಳು,ಅಳಿಯ ಎಲ್ಲರೂ ಇಲ್ಲಿಗೆ ಬಂದಿದ್ದಾರೆ.ನನಗೂ ಇಲ್ಲಿ ಬರಲು ಬಹಳ ಆಶೆ ಇತ್ತು ಅದು ಇಂದು ನೆರವೇರಿದೆ.ಪುತ್ರ ಅಹಾನ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಬಾರ್ಡರ್ -2 ಚಿತ್ರ ಬಿಡುಗಡೆಯಾಗುತ್ತಿದೆ.ಅದರ ಯಶಸ್ಸಿಗಾಗಿ ಆಶೀರ್ವಾದ ಬೇಡಲು ಇಲ್ಲಿಗೆ ಬಂದಿದ್ದೇನೆ.
ತುಳು ಭಾಷೆ,ಸಂಸ್ಕೃತಿಯನ್ನು ಜಗತ್ತಿಗೆ ಪಸರಿಸುವ ಉದ್ದೇಶದಿಂದ ಈಗಾಗಲೇ “ಜೈ”ತುಳು ಸಿನಿಮಾದಲ್ಲಿ ನಟಿಸಿದ್ದೇನೆ.ತುಳು,ಕನ್ನಡ ಸಿನೆಮಾದಲ್ಲಿ ಸದ್ಯಕ್ಕೆ ಬೇರೆ ಯೋಜನೆಗಳಿಲ್ಲ ಎಂದರು.
ಕುತ್ತಾರು ಕೊರಗತನಿಯ ಆದಿಸ್ಥಳ ಕ್ಷೇತ್ರದ ಪರವಾಗಿ ನಟ ಸುನೀಲ್ ಶೆಟ್ಟಿ ಅವರನ್ನ ಸನ್ಮಾನಿಸಿ ಗೌರವಿಸಲಾಯಿತು.
ಮುಂಬಯಿ ಉದ್ಯಮಿ ವಿವೇಕ್ ಶೆಟ್ಟಿ ಬೊಲ್ಯಗುತ್ತು,ಕುತ್ತಾರು ಕೊರಗತನಿಯ ಆದಿಕ್ಷೇತ್ರದ ಮಹಾಬಲ ಹೆಗ್ಡೆ,ದೇವಿಪ್ರಸಾದ್ ಶೆಟ್ಟಿ,ಶ್ರೀರಾಮ್ ರೈ ಮೊದಲಾದವರು ಉಪಸ್ಥಿತರಿದ್ದರು.


