ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್ ಬಂಧನಕ್ಕೆ ನನ್ನ ಹೆಸರೇಕೆ ತಳುಕು ಹಾಕಿಕೊಳ್ಳುತ್ತಿದೆಯೋ ಗೊತ್ತಿಲ್ಲ, ನಾನು ಮತ್ತು ಅವರು ಆತ್ಮೀಯ ಗೆಳೆಯರು, ಇಲ್ಲ ಎಂದು ಹೇಳಿಲ್ಲ, ಆದರೆ ಈ ಕಾರಣಕ್ಕೆ ನನ್ನ ಹೆಸರನ್ನು ಸೇರಿಸುವುದು ಸರಿಯಲ್ಲ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಅವರಿಂದ ತಪ್ಪಾಗಿರಬಹುದಾ ಎಂದು ಸಚಿವರನ್ನು ಕೇಳಿದಾಗ, ತಪ್ಪು ಮಾಡಿರದಿದ್ದರೆ ಜೈಲಿಗೆ ಯಾಕೆ ಹೋಗ್ತಾರೆ ಅಂತ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.