ದಿಗಂತ ವರದಿ ಹುಬ್ಬಳ್ಳಿ:
ಇಲ್ಲಿಯ ಕೇಶ್ವಾಪುರ ರಮೇಶ ಭವನದ ಭುವನೇಶ್ವರಿ ಆಭರಣಗಳ ಮಳಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಅಂತರಾಜ್ಯ ಕಳ್ಳರ ಬಂಧಿಸಿರುವ ಪೊಲೀಸರು ಅವರಿಂದ 77 ಲಕ್ಷ ಆಭರಣ, ನಗದು ಹಾಗೂ ಒಂದು ಕಾರು ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ಮೂಲದ ಫರಹಾನ್ ಶೇಖ್, ಮುಖೇಶ ಯಾದವ, ಪಾತೀಮಾ ಶೇಖ, ಅಪ್ತಾಬ ಅಹಮ್ಮದ ಶೇಖ, ತಲತ್ ಶೇಖ ಬಂಧಿತರು.
ಜು.16 ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಭರಣ ಮಳಿಗೆ ಕಳವು ಪ್ರಕರಣ ದಾಖಲಾಗಿತ್ತು. ನಾಲ್ವರು ಪಿಎಸ್ ಐ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಆಗ ಮುಖ್ಯ ಆರೋಪಿ ಫರಹಾನ್ ಶೇಖ ಎಂಬಾತನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಏಳೆಂಟು ಜನರು ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿತ್ತು.
ಹಿನ್ನೆಲೆ ಕಾರ್ಯಚರಣೆ ನಡೆಸಿದ ಪೊಲೀಸ್ ತಂಡ ಆರೋಪಿಗಳ ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ ಎಂದು ಹು ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.
ನಾಲ್ವರು ಆರೋಪಿಗಳಿಂದ 55 ಲಕ್ಷ ರೂ. ಮೌಲ್ಯದ 780ಗ್ರಾಂ ಬಂಗಾರ ಆಭರಣ, 17 ಲಕ್ಷ ರೂ. ಮೌಲ್ಯದ 23.3 ಕೆ.ಜಿ. ಬೆಳ್ಳಿ, 10 ಸಾವಿರ ನಗದು ಹಾಗೂ 5 ಲಕ್ಷ ರೂ. ಮೌಲ್ಯದ ಒಂದು ಕಾರ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿರಿವುದು ವಿಚಾರಣೆ ವೇಳೆ ತಿಳಿದು ಬಂದಿದ್ದು, ತನಿಖೆ ಮುಂದುವರಿದಿದೆ. ಬಾಕಿ ಉಳಿದ ಆಭರಣಗಳ ಪತ್ತೆ ಹಚ್ಚಲಾಗುವುದು. ಕೇಶ್ವಾಪುರ ಪೊಲೀಸ್ ಠಾಣೆ ಅಧಿಕಾರಿ ಕೆ.ಎಸ್. ಹಟ್ಟಿ, ಗೋಕುಲ ರಸ್ತೆ ಪ್ರವೀಣ ನಿಲ್ಲಮ್ಮನವರ, ಕಮರಿಪೇಟನ ಮಹಾಂತೇಶ ಹೂಳಿ, ಕಸಬಾಪೇಟ ಪಿಎಸ್ ಐ ರವಿ ವಡ್ಡರ, ಕೇಶಾಪುರ ಪಿಎಸ್ ಐ ಶರಣ ದೇಸಾಯಿ, ಪುನೀತ್ ಕುಮಾರ್, ಮಂಜುನಾಥ, ಸಿಬ್ಬಂದಿಗಳಾದ ಆನಂದ ಪೂಜಾರಿ, ಚಂದ್ರ ಲಮಾಣಿ ಉತ್ತಮ ಕಾರ್ಯ ಮಾಡಿ ಪ್ರಕರಣ ಬೇಧಿಸಿದ್ದಾರೆ ಎಂದು ತಿಳಿಸಿದರು.