ಪ್ರತಿ ಬೂತ್ ನಲ್ಲಿ 400 ಹೊಸ ಸದಸ್ಯರ ನೋಂದಣಿ ಗುರಿ ಇದೆ: ವಿಜಯೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಳೆದ ವರ್ಷದ 1.08 ಕೋಟಿ ಸದಸ್ಯರ ನೋಂದಣಿಯ ದಾಖಲೆ ಮೀರುವ ಮಹತ್ವಾಕಾಂಕ್ಷೆಯೊಂದಿಗೆ ಬಿಜೆಪಿಯ ರಾಜ್ಯ ಘಟಕವು ತನ್ನ ಸದಸ್ಯತ್ವ ಅಭಿಯಾನವನ್ನು ಬುಧವಾರ ಪ್ರಾರಂಭಿಸಿದೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತಿ ಬೂತ್‌ಗೆ ಕನಿಷ್ಠ 400 ಹೊಸ ಸದಸ್ಯರನ್ನು ನೇಮಕ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು. ನಾವು ಸಮಾಜದ ವಿವಿಧ ವರ್ಗಗಳ ಜನರನ್ನು ತಲುಪುತ್ತೇವೆ ಮತ್ತು ಅವರನ್ನು ಬಿಜೆಪಿ ತೆಕ್ಕೆಗೆ ತರುತ್ತೇವೆ.

ಈ ಚಾಲನೆಯು ನಮ್ಮ ಹಿಂದಿನ ದಾಖಲೆಯನ್ನು ಮೀರಿಸುತ್ತೇವೆ, ಇದ ಜೊತೆಗೆ ಮಾಜಿ ಪ್ರಧಾನಿ ಎಬಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತದೆ. 2047ನೇ ಇಸವಿಗೆ ಭಾರತವನ್ನು ವಿಕಸಿತ ರಾಷ್ಟ್ರವಾಗಿ, ಅಭಿವೃದ್ಧಿ ಹೊಂದಿದ ದೇಶವಾಗಿ ಮಾಡುವ ಕನಸು ಮಾನ್ಯ ಪ್ರಧಾನಿಯವರದು. ಮೋದಿಜೀ ಅವರಿಗೆ ಇನ್ನೂ ಹೆಚ್ಚು ಬಲ ಕೊಡುವ ಕೆಲಸ ನಡೆಸಬೇಕಿದೆ ಅಭಿಯಾನದ ಯಶಸ್ವಿಗಾಗಿ ಪ್ರತಿ ಬೂತ್‌ಗಳಲ್ಲಿ ಕಾರ್ಯಕರ್ತರನ್ನು ನೇಮಿಸಲಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!