January17, 2026
Saturday, January 17, 2026
spot_img

WPL 2026: 9 ಪಂದ್ಯಗಳ ಬಳಿಕ ಅಂಕಪಟ್ಟಿ ರಿಲೀಸ್: ಯಾವತ್ತೂ ಟಾಪ್ ನಲ್ಲಿರೋದು ನಾವೇ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವುಮೆನ್ಸ್ ಪ್ರೀಮಿಯರ್ ಲೀಗ್‌ 2026 (WPL 2026) ಸೀಸನ್‌ ನಿಧಾನವಾಗಿ ರಂಗೇರುತ್ತಿದ್ದು, ಈಗಾಗಲೇ 9 ಪಂದ್ಯಗಳು ಯಶಸ್ವಿಯಾಗಿ ಮುಕ್ತಾಯಗೊಂಡಿವೆ. ಐದು ತಂಡಗಳೂ ಕನಿಷ್ಠ ಮೂರು ಪಂದ್ಯಗಳನ್ನು ಆಡಿದ್ದು, ಪ್ರತಿಯೊಂದು ತಂಡವೂ ತನ್ನ ಗೆಲುವಿನ ಖಾತೆ ತೆರೆದಿದೆ. ಈ ಹಂತದಲ್ಲಿ ಅಂಕಪಟ್ಟಿಯ ಸ್ಥಿತಿ ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲ ಹುಟ್ಟಿಸಿದೆ.

ಸದ್ಯ ಅಂಕಪಟ್ಟಿಯ ಶಿಖರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ನೆಲೆಸಿದೆ. ಮೂರು ಪಂದ್ಯಗಳನ್ನು ಆಡಿರುವ ಆರ್‌ಸಿಬಿ, ಮೂರೂ ಪಂದ್ಯಗಳಲ್ಲಿ ಗೆದ್ದು ಶೇ.100 ಜಯದೊಂದಿಗೆ 6 ಅಂಕಗಳನ್ನು ಕಲೆಹಾಕಿದೆ. ಜೊತೆಗೆ +1.828 ಎಂಬ ಬಲಿಷ್ಠ ನೆಟ್ ರನ್ ರೇಟ್ ತಂಡದ ಪ್ರಾಬಲ್ಯವನ್ನು ತೋರಿಸುತ್ತದೆ.

ಎರಡನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ (MI) ಇದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿ 4 ಅಂಕಗಳೊಂದಿಗೆ +0.469 ನೆಟ್ ರನ್ ರೇಟ್ ಹೊಂದಿದೆ.

ಮೂರನೇ ಸ್ಥಾನವನ್ನು ಗುಜರಾತ್ ಜೈಂಟ್ಸ್ ಪಡೆದುಕೊಂಡಿದೆ. ಆಶ್ಲೀ ಗಾರ್ಡ್ನರ್ ನಾಯಕತ್ವದ ತಂಡ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು, ಎರಡು ಸೋಲು ಕಂಡು 4 ಅಂಕ ಗಳಿಸಿದೆ. ಆದರೆ -0.319 ನೆಟ್ ರನ್ ರೇಟ್ ತಂಡಕ್ಕೆ ಸವಾಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕನೇ ಸ್ಥಾನದಲ್ಲಿದ್ದು, ಮೂರು ಪಂದ್ಯಗಳಲ್ಲಿ ಒಂದೇ ಗೆಲುವು ಸಾಧಿಸಿ 2 ಅಂಕಗಳಿಗೆ ಸೀಮಿತವಾಗಿದೆ. ತಂಡದ ನೆಟ್ ರನ್ ರೇಟ್ -0.833 ಆಗಿದೆ.

ಐದನೇ ಸ್ಥಾನದಲ್ಲಿ ಯುಪಿ ವಾರಿಯರ್ಸ್ ಇದೆ. ನಾಲ್ಕು ಪಂದ್ಯಗಳಲ್ಲಿ ಒಂದೇ ಜಯ ಸಾಧಿಸಿರುವ ತಂಡ 2 ಅಂಕಗಳೊಂದಿಗೆ -0.906 ನೆಟ್ ರನ್ ರೇಟ್ ಹೊಂದಿದೆ.

ಮುಂದಿನ ಪಂದ್ಯಗಳು ಅಂಕಪಟ್ಟಿಯಲ್ಲಿ ದೊಡ್ಡ ಬದಲಾವಣೆ ತರಲಿವೆ ಎಂಬ ನಿರೀಕ್ಷೆಯಿದೆ.

Must Read

error: Content is protected !!