July 6, 2026
Monday, July 6, 2026
spot_img

ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಗೆ ಮಣೆ ಹಾಕಿದ ಸನ್ ರೈಸರ್ಸ್ ಲೀಡ್ಸ್: ಬಿಸಿಸಿಐ ರಿಯಾಕ್ಷನ್ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಿ ಹಂಡ್ರೆಡ್ಸ್ ಲೀಗ್ ನ ಹರಾಜಿನಲ್ಲಿ ಸನ್ ಗ್ರೂಪ್ ಮಾಲೀಕತ್ವದ ಸನ್ ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಪಾಕ್ ಆಟಗಾರರನ್ನು ಖರೀದಿಸಿದ್ದು. ಭಾರತದಲ್ಲಿ ವಿವಾದಕ್ಕೆ ಕಾರಣವಾಗಿದೆ.

ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಪ್ರತಿಕ್ರಿಯಿಸಿದ್ದು, ವಿದೇಶಿ ಲೀಗ್‌ನಲ್ಲಿ ಯಾವ ತಂಡವು ಯಾವ ಆಟಗಾರನನ್ನು ಖರೀದಿಸುತ್ತದೆ ಎಂಬುದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದಿದೆ.

ಸನ್ ಗ್ರೂಪ್ ಮಾಲೀಕತ್ವದ ಸನ್ ರೈಸರ್ಸ್ ಹೈದರಾಬಾದ್ ಐಪಿಎಲ್ ನ ತಂಡಗಳಲ್ಲಿ ಒಂದಾಗಿದೆ. ಇಂಗ್ಲೆಂಡ್ ನ ಪ್ರಮುಖ ಕ್ರಿಕೆಟ್ ಲೀಗ್ ಆಗಿರುವ ದಿ ಹಂಡ್ರೆಡ್ಸ್ ನಲ್ಲಿ ಆಡುತ್ತಿರುವ ಸನ್ ರೈಸರ್ಸ್ ಲೀಡ್ಸ್ ತಡದ ಮಾಲೀಕತ್ವ ಸನ್ ಗ್ರೂಪ್ ಕೈಯಲ್ಲಿದೆ.

ಮಾರ್ಚ್ 12ರ ಗುರುವಾರ ಲಂಡನ್ ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸನ್ ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಪಾಕಿಸ್ತಾನದ ಅಬ್ರಾರ್ ಅಹ್ಮದ್ ಅವರನ್ನು 1.9 ಲಕ್ಷ ಪೌಂಡ್(ಸುಮಾರು 2.32 ಕೋಟಿ ರೂ.) ಗೆ ಖರೀದಿಸಿತು. ಈ ಹರಾಜು ಪ್ರಕ್ರಿಯೆ ವೇಳೆ ತಂಡದ ಪ್ರಧಾನ ಕೋಚ್ ಡೇನಿಯಲ್ ವೆಟ್ಟೋರಿ ಅವರ ಜೊತೆ ಕಾವ್ಯ ಮಾರನ್ ಅವರು ಸಹ ಇದ್ದರು. ಸನ್ ಗ್ರೂಪ್ ನ ಮಾಲೀಕತ್ವದ ಫ್ರಾಂಚೈಸಿಯ ಈ ನಡೆದ ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ , ಸನ್ ರೈಸರ್ಸ್ ಲೀಡ್ಸ್ ಫ್ರಾಂಚೈಸಿಯ ಈ ನಿರ್ಧಾರಕ್ಕೂ ನಮಗೂ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ. ನಮ್ಮ ಅಧಿಕಾರ ವ್ಯಾಪ್ತಿ ಐಪಿಎಲ್ ಗೆ ಸೀಮಿತವಾಗಿದೆ. ವಿದೇಶದಲ್ಲಿ ನಡೆಯುವ ಯಾವುದೇ ಲೀಗ್ ಗೂ ನಮಗೂ ಸಂಬಂಧವಿಲ್ಲ. ಅಲ್ಲಿ ಯಾರಾದರೂ ಯಾವುದೇ ಆಟಗಾರನನ್ನು ಸೇರಿಸಿಕೊಂಡಲ್ಲಿ ನಾವು ಹೇಗೆ ಮೂಗು ತೂರಿಸಲು ಸಾಧ್ಯ. ಐಪಿಎಲ್ ನಲ್ಲಿ ಮಾತ್ರ ಈವರೆಗೆ ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಫ್ರಾಂಚೈಸಿ ನೀಡಿರುವ ಕಾರಣವೇನು?
ಈ ಬಗ್ಗೆ ಮಾತನಾಡಿರುವ ಸನ್‌ರೈಸರ್ಸ್ ಲೀಡ್ಸ್ ತಂಡದ ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ ಅವರು ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಹರಾಜಿನಲ್ಲಿ ತಮ್ಮ ಮೊದಲ ಆಯ್ಕೆಯ ಸ್ಪಿನ್ನರ್ ಅನ್ನು ತಂಡ ಪಡೆಯಲು ಅಸಾಧ್ಯವಾದ ಕಾರಣ ಅಬ್ರಾರ್ ಅಹ್ಮದ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು ಎಂದಿದ್ದಾರೆ.ಆರಂಭದಲ್ಲಿ ಆದಿಲ್ ರಶೀದ್ ನಮ್ಮ ಆದ್ಯತೆಯಾಗಿದ್ದರು. ಆದರೆ ಅವರನ್ನು ಸದರ್ನ್ ಬ್ರೇವ್‌ ಖರೀದಿಸುವಲ್ಲಿ ಯಶಸ್ವಿಯಾಯಿತು. ಹೀಗಾಗಿ ನಾವು ಸ್ಪಷ್ಟವಾಗಿ ವಿದೇಶಿ ಸ್ಪಿನ್ನರ್‌ ಮಣೆ ಹಾಕಬೇಕಾಯಿತು. ನಾವು ನಾಲ್ಕು ಅಥವಾ ಐದು ಮಂದಿಯ ಹುಡುಕಾಟದಲ್ಲಿದ್ದೆವು. ಅವರಲ್ಲಿ ಅಬ್ರಾರ್ ಸಹ ಒಬ್ಬರಾಗಿದ್ದರು. ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !