ಗಣೇಶ ಚತುರ್ಥಿ ಹಬ್ಬದ ಸಂಭ್ರಮ: ಸಿಲಿಕಾನ್ ಸಿಟಿಯಲ್ಲಿ ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು ಮೂರ್ತಿಗಳ ವಿಸರ್ಜನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ನಾಡಿನೆಲ್ಲಡೆ ಗಣೇಶ ಚತುರ್ಥಿ ಹಬ್ಬದ ಸಂಭ್ರಮ. ಸಿಲಿಕಾನ್ ಸಿಟಿಯಲ್ಲೂ ಮನೆ ಮನೆಗಳಲ್ಲಿ ಸಡಗರ. ಜನತೆ ಅದ್ದೂರಿಯಿಂದ ಗಣೇಶ ಚತುರ್ಥಿಯನ್ನು ಬರಮಾಡಿಕೊಂಡರು.

ಶನಿವಾರ ಒಂದೇ ದಿನ ಬಿಬಿಎಂಪಿ 8 ವಲಯಗಳಲ್ಲಿ 2,17,006 ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗಿದೆ. ಕೆರೆಗಳು, ಕಲ್ಯಾಣಿ, ಮೊಬೈಲ್ ಟ್ಯಾಂಕರ್ ಸೇರಿ ಹಲವೆಡೆ ಗಣೇಶ ವಿಸರ್ಜನೆ ಮಾಡಲಾಗಿದೆ. ವಲಯವಾರು ಗಣಪನ ಮೂರ್ತಿಗಳ ವಿಸರ್ಜನೆ ಮಾಡಿರುವ ಬಗ್ಗೆ ಪಾಲಿಕೆ ಅಂಕಿ-ಅಂಶ ಬಿಡುಗಡೆಗೊಳಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿರುವ ವಿವರ:
ಪೂರ್ವ ವಲಯ: 40791
ಪಶ್ಚಿಮ ವಲಯ: 52429
ದಕ್ಷಿಣ ವಲಯ: 84149
ಬೊಮ್ಮನಹಳ್ಳಿ ವಲಯ: 3915
ದಾಸರಹಳ್ಳಿ ವಲಯ: 1719
ಮಹದೇವಪುರ ವಲಯ: 7229
ಆರ್.ಆರ್.ನಗರ ವಲಯ: 12680
ಯಲಹಂಕ ವಲಯ: 14094
ಒಟ್ಟು: 217006

ಗಣೇಶ ವಿಸರ್ಜನೆ ವೇಳೆ ಸಾಕಷ್ಟು ಪಿಒಪಿ ಗಣೇಶ ಮೂರ್ತಿಗಳು ಪತ್ತೆ ಆಗಿವೆ. ಪಿಒಪಿ ಗಣೇಶ ಮೂರ್ತಿಗಳನ್ನ ವಿಸರ್ಜನೆ ಮಾಡದೇ ಹಾಗೇಯೆ ಇಟ್ಟಿದ್ದು, ನಿನ್ನೆ ಒಂದೇ ದಿನ ಕೆರೆ ಗೆ 200ಕ್ಕೂ ಹೆಚ್ಚು ಪಿಒಪಿ ಗಣೇಶ ಮೂರ್ತಿಗಳು ಬಂದಿದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!