ರೇಣುಕಾಸ್ವಾಮಿ ಕೊಲೆಯ ಮುನ್ನ ದರ್ಶನ್​ ಜೊತೆ ಪವಿತ್ರಾ ಗೌಡ ಜಗಳವಾಡಿದ್ದು ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪೊಲೀಸರು ಪ್ರತಿಯೊಬ್ಬ ಆರೋಪಿಯ ಸ್ವ-ಇಚ್ಛಾ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು 3991 ಪುಟದ ಜಾರ್ಜ್​ಶೀಟ್​ನಲ್ಲಿ ದಾಖಲಿಸಿದ್ದಾರೆ. ಆರೋಪಿ ನಂಬರ್ 1 ಆಗಿರುವ ಪವಿತ್ರಾಗೌಡರನ್ನು ವಿಚಾರಣೆ ಮಾಡಿರುವ ಪೊಲೀಸರು ಅವರ ಹೇಳಿಕೆಯನ್ನು ಪುಟ ಸಂಖ್ಯೆ 3849 ರಿಂದ 3851 ಪುಟದವರೆಗೆ ದಾಖಲಿಸಿದ್ದಾರೆ. ಪವಿತ್ರಾ ತಮ್ಮ ಹೇಳಿಕೆಯಲ್ಲಿ ಈ ಹಿಂದೆ ದರ್ಶನ್ ಜೊತೆ ಜಗಳವಾಡಿ ಮಾತು ಬಿಟ್ಟಿದ್ದರ ಬಗ್ಗೆಯೂ ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆಯ ಒಂದು ತಿಂಗಳ ಮುಂಚೆ ಪವಿತ್ರಾಗೌಡ ದರ್ಶನ್​ ಜೊತೆ ಜಗಳವಾಡಿ ಮಾತು ಬಿಟ್ಟಿದ್ದರು. ಅದಕ್ಕೆ ಕಾರಣ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಇದೇ ವರ್ಷ ಮೇ 19 ರಂದು ದರ್ಶನ್​ ಪತ್ನಿ ವಿಜಯಲಕ್ಷ್ಮೀ ಜೊತೆ ತಮ್ಮ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ದುಬೈಗೆ ಹೋಗಿದ್ದರು. ನನಗೆ ತಿಳಿಸದೇ ಪತ್ನಿಯೊಂದಿಗೆ ದುಬೈಗೆ ಹೋಗಿದ್ದರಿಂದ ನಾನು ಕೋಪಗೊಂಡು ಅವರೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದೆ ಎಂದು ತಮ್ಮ ಸ್ವಇಚ್ಛಾ ಹೇಳಿಕೆಯಲ್ಲಿ ದಾಖಲಿಸಿದ್ದಾರೆ.

ಇದರೊಂದಿಗೆ ಫೆಬ್ರವರಿಯಿಂದ ಗೌತಮ್ ಕೆ ಎಸ್ ಎಂಬ ಖಾತೆಯಿಂದ ನನಗೆ ನಿರಂತರವಾಗಿ ಅಶ್ಲೀಲ ಸಂದೇಶ, ಫೋಟೋಗಳು ಬರುತ್ತಿರುವ ಬಗ್ಗೆಯೂ ಪವಿತ್ರಾಗೌಡ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!