ನೀನಲ್ಲ, ನಿಮ್ಮಪ್ಪನ ಕೈಲೂ ನನ್ನ ಟಚ್ ಮಾಡಕ್ಕಾಗಲ್ಲ.. ಸುಧಾಕರ್ ಗೆ ಪ್ರದೀಪ್ ಈಶ್ವರ್ ಟಾಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುಧಾಕರ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಶಾಸಕ ಪ್ರದೀಪ್ ಈಶ್ವರ್, ನಿನಲ್ಲ, ನಿಮ್ಮಪ್ಪನ ಕೈಲೂ ನನ್ನ ಟಚ್ ಮಾಡೋಕೆ ಆಗಲ್ಲ ಎಂದು ಟಾಂಗ್ ನೀಡಿದ್ದಾರೆ.

ಸ್ಥಳೀಯ ಚುನಾವಣೆ ಬಳಿಕ ಮಾತನಾಡಿದ ಅವರು, ಕೆ.ಸುಧಾಕರ್ ಕೋವಿಡ್ ಕಳ್ಳ. ಸುಧಾಕರ್‌ನನ್ನು ಜೈಲಿಗೆ ಹಾಕುವವರೆಗೂ ಬಿಡಲ್ಲ. ದಮ್ಮು ಇದ್ರೆ ಬಚಾವ್ ಆಗು ನೋಡೋಣ ಎಂದು ಕೆ.ಸುಧಾಕರ್ ಅವರ ಮಾತಿಗೆ ತಿರುಗೇಟು ನೀಡಿದ್ದಾರೆ.

ಸಂಸದರು ಖರ್ಚು ಮಾಡಿ ಕಾಂಗ್ರೆಸ್ ಸದಸ್ಯರನ್ನು ಖರೀದಿ ಮಾಡಿದ್ದಾರೆ. ನನ್ನ ಒಂದು ಕೂದಲನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಹೆಣಗಳ ಮೇಲೆ ದುಡ್ಡು ಮಾಡಿ ನಗರಸಭೆ ಚುನಾವಣೆಯಲ್ಲಿ ಹಾಕಿದ್ದಾರೆ. ನಮ್ಮ ಬಳಿ ಹಣ ಇಲ್ಲ. ನಿನ್ನ ಅಖಾಡದಲ್ಲಿ ಬಂದು ನಾನು ನಿನ್ನನ್ನು ಹೊಡಿದಿದ್ದೇನೆ. ನಾನು ಒಬ್ಬ ಗಂಡಸು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!