ಕೋಲ್ಕತ್ತಾ ವೈದ್ಯೆ ಪ್ರಕರಣ: ರಾಜೀನಾಮೆ ನೀಡಲು ಸಿದ್ಧ ಎಂದ ಮಮತಾ ಬ್ಯಾನರ್ಜಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಕೊಲ್ಕತ್ತಾದ ಆರ್​ಜಿ ಕರ್ ಆಸ್ಪತ್ರೆಯ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು ಪ್ರತಿಭಟನಾ ನಿರತ ವೈದ್ಯರನ್ನು ಭೇಟಿಯಾಗಲು ಬಂದಿದ್ದ ಮಮತಾ ಬ್ಯಾನರ್ಜಿ, ಕೊಲೆಯಾದ ವೈದ್ಯರಿಗೆ ನ್ಯಾಯ ಕೊಡಿಸಲು ನಾನು ಸಿಎಂ ಪದವಿಯನ್ನು ತ್ಯಜಿಸಲು ಕೂಡ ಸಿದ್ಧಳಿದ್ದೇನೆ ಎಂದು ಹೇಳಿದ್ದಾರೆ.

ನನ್ನ ರಾಜೀನಾಮೆಯಿಂದ ಸಾಮಾನ್ಯ ಜನರಿಗೆ ನ್ಯಾಯ ಸಿಗುತ್ತದೆ ಎಂದರೆ ನಾನು ಅದಕ್ಕೂ ಸಿದ್ಧಳಿದ್ದೇನೆ. ಆದರೆ, ಪ್ರತಿಭಟನಾನಿರತರಿಗೆ ನ್ಯಾಯ ಬೇಕಾಗಿಲ್ಲ, ಬದಲಾಗಿ ನನ್ನ ಕುರ್ಚಿಯಷ್ಟೇ ಬೇಕಾಗಿದೆ ಎಂದಿದ್ದಾರೆ.

ಪ್ರತಿಭಟನಾನಿರತ ವೈದ್ಯರನ್ನು ನೋಡಲು ನಾನು ರಾಜ್ಯ ಸಚಿವಾಲಯದಲ್ಲಿ ಎರಡು ಗಂಟೆಗಳ ಕಾಲ ಕಾಯುತ್ತಿದ್ದೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!