ಸೆಕ್ಸ್‌ ವರ್ಕರ್‌ನ್ನು ಮನೆಗೆ ಕರೆಸಿ ಮರ್ಡರ್‌ ಮಾಡಿದ ಕಿರಾತಕ, ಮೃತದೇಹ ಸಿಕ್ಕಿದ್ದು ಸೂಟ್‌ಕೇಸ್‌ನಲ್ಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸೆಕ್ಸ್‌ವರ್ಕರ್‌ನ್ನು ಮನೆಗೆ ಕರೆಸಿ ಆಕೆ ಹೆಚ್ಚು ದುಡ್ಡು ಡಿಮ್ಯಾಂಡ್‌ ಮಾಡಿದ ಕಾರಣಕ್ಕೆ ಅವಳನ್ನೇ ಮರ್ಡರ್‌ ಮಾಡಲಾಗಿದೆ.

ಚೆನ್ನೈನಲ್ಲಿ ಘಟನೆ ನಡೆದಿದ್ದು, ಆರೋಪಿ ಮಣಿಕಂಠ ಎನ್ನುವಾತ ದೀಪಾ ಎಂಬ ಸೆಕ್ಸ್‌ ವರ್ಕರ್‌ನ್ನು ಮನೆಗೆ ಕರೆಸಿಕೊಂಡಿದ್ದ. ಸ್ವಲ್ಪ ಸಮಯ ಚೆನ್ನಾಗಿ ಇಬ್ಬರು ಕಾಲ ಕಳೆದಿದ್ದರು, ನಂತರ ದೀಪಾ ಹೆಚ್ಚು ಹಣವನ್ನು ಕೇಳಿದ್ದಾಳೆ. ಅದಕ್ಕೆ ಮಣಿಕಂಠ ಒಪ್ಪಿಲ್ಲ.

ಮಾತುಕತೆ ಅತಿರೇಕಕ್ಕೆ ಹೋಗಿದ್ದು, ಮಣಿಕಂಠ ದೀಪಾಗೆ ಸುತ್ತಿಗೆಯಿಂದ ಬಾರಿಸಿದ್ದಾನೆ. ದೀಪಾ ತಕ್ಷಣ ಪ್ರಾಣಬಿಟ್ಟಿದ್ದಾಳೆ.

ಕಿರಾತಕನ ಕೃತ್ಯಕ್ಕೆ ಸೆಕ್ಸ್ ವರ್ಕರ್ ಸ್ಮಶಾನ ಸೇರಿದ ಘಟನೆಯೊಂದು ನೆರೆಯ ರಾಜ್ಯದಲ್ಲಿ ನಡೆದಿದೆ. ಇವನೇ ಭೀಕರ ಕೊಲೆ ಆರೋಪಿ ಮಣಿಕಂಠ. ಮಹಿಳೆ ದೇಹವನ್ನ ತುಂಡು ತುಂಡಾಗಿ ಕತ್ತರಿಸಿ ಸೂಟ್‌ಕೇಸ್‌ನಲ್ಲಿ ತುಂಬಿಸಿದ್ದ, ಶವ ಪತ್ತೆಯಾಗಿದೆ. ದೊರೈಪಕ್ಕಂ ಪ್ರದೇಶದಲ್ಲಿ ಅನಾಥವಾಗಿ ಸೂಟ್‌ಕೇಸ್ ಒಂದು ಬಿದ್ದಿದ್ದು, ಅದರಿಂದ ರಕ್ತ ಸೋರುತ್ತಿದೆ ಎಂದು ಚೆನ್ನೈನ ಕುಮಾರನ್ ಕುಡಿಲ್‌ನ ನಿವಾಸಿಯೊಬ್ಬರು ಮುಂಜಾನೆ 5.30ರ ವೇಳೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸೂಟ್‌ಕೇಸ್ ಪತ್ತೆಯಾದ ಜಾಗದಿಂದ ಕೇವಲ ನೂರು ಮೀಟರ್ ದೂರದಲ್ಲಿ ವಾಸವಿರುವ 23 ವರ್ಷದ ಮಣಿಕಂದನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು, ಸೂಟ್‌ಕೇಸ್ ಓಪನ್ ಮಾಡಿದಾಗ ಒಳಗೆ ಕತ್ತರಿಸಿ ಇರಿಸಿದ್ದ ಮಹಿಳೆಯ ಶವ ಕಂಡು ಆಘಾತಗೊಂಡಿದ್ದು, ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಸಿಸಿಟಿವಿ ಸಹಾಯದಿಂದ ಮಣಿಕಂಠ ಆರೋಪಿ ಎಂಬುದನ್ನು ಕಂಡುಹಿಡಿಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!