January18, 2026
Sunday, January 18, 2026
spot_img

BBK12 ಫಿನಾಲೆಗೂ ಮುನ್ನ ಕಿಚ್ಚನ ಕ್ಯೂಟ್ ಪೋಸ್ಟ್: ಏನ್ ಹೇಳಿದ್ರು ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೆ ಕೌಂಟ್ ಡೌನ್ ಶುರುವಾಗಿದ್ದು, ವಿನ್ನರ್ ಯಾರು ಎಂಬ ಕುತೂಹಲ ಪ್ರೇಕ್ಷಕರಲ್ಲಿ ತೀವ್ರವಾಗಿದೆ. ಈ ಮಧ್ಯೆ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರು ಫಿನಾಲೆಗೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಸುಂದರವಾದ ಪೋಸ್ಟ್ ಹಂಚಿಕೊಂಡಿದ್ದಾರೆ.

ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ ಸುದೀಪ್, ಈ ಸೀಸನ್ ಅನ್ನು ಅದ್ಭುತವಾಗಿ ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. “ಇಂದು ಸೂರ್ಯಾಸ್ತದ ಬಳಿಕ ಬಿಗ್ ಬಾಸ್ ಸೀಸನ್ 12ಕ್ಕೆ ತೆರೆ ಬೀಳಲಿದೆ. ವಿನ್ನರ್ ಯಾರು ಎನ್ನುವುದು ಅದೇ ಸಮಯದಲ್ಲಿ ಗೊತ್ತಾಗಲಿದೆ” ಎಂದು ಅವರು ಹೇಳಿದ್ದಾರೆ.

ಈ ರಿಯಾಲಿಟಿ ಶೋ ಯಶಸ್ಸಿನ ಹಿಂದೆ ಶ್ರಮಿಸಿದ ತಾಂತ್ರಿಕ ತಂಡ, ಕ್ರಿಯೇಟಿವ್ ಸಿಬ್ಬಂದಿ ಮತ್ತು ಕಾರ್ಯಕ್ರಮದ ಹಿನ್ನಲೆಯಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಕಿಚ್ಚ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ಮನೆಯೊಳಗೆ ಕಾಲಿಟ್ಟ ಸ್ಪರ್ಧಿಗಳು ಹಾಗೂ ಈ ಸೀಸನ್‌ನ ವಿನ್ನರ್‌ಗೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿರುವುದು ಪೋಸ್ಟ್‌ನಲ್ಲಿ ಉಲ್ಲೇಖವಾಗಿದೆ.

“ಇಂದು ಮನೆ ಬಾಗಿಲುಗಳು ಮುಚ್ಚಲಾಗುತ್ತಿವೆ. ಮುಂದಿನ ಸೀಸನ್ ಆರಂಭವಾಗುವವರೆಗೂ ಬಿಗ್ ಬಾಸ್ ಮನೆ ವಿಶ್ರಾಂತಿಗೆ ಹೋಗಲಿದೆ” ಎಂದು ಸುದೀಪ್ ತಿಳಿಸಿದ್ದಾರೆ. ಫಿನಾಲೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಕಿಚ್ಚ ಅವರ ಪೋಸ್ಟ್ ಅಭಿಮಾನಿಗಳಲ್ಲಿ ಮತ್ತಷ್ಟು ಸಂಭ್ರಮ ಮತ್ತು ನಿರೀಕ್ಷೆ ಮೂಡಿಸಿದೆ.

Must Read

error: Content is protected !!