ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ.
ಎ-15, ಎ-17 ಆರೋಪಿಗಳಾದ ಕಾರ್ತಿಕ್, ನಿಖಿಲ್ ನಾಯ್ಕ್ ಗೆ 57 ನೇ ಸಿಸಿಹೆಚ್ ಕೋರ್ಟ್ ಜಾಮೀನು ನೀಡಿದೆ. ಪ್ರಕರಣದ ಎ-16 ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ನೀಡಿದೆ.
A16 ಕೇಶವಮೂರ್ತಿ: ರೇಣುಕಾಸ್ವಾಮಿ ಕೇಸ್ನಲ್ಲಿ 5 ಲಕ್ಷ ರೂಪಾಯಿ ಹಣ ಪಡೆದು ಮೃತದೇಹ ಸಾಗಿಸುವಲ್ಲಿ ಭಾಗಿಯಾಗಿದ್ದರು. ಬಳಿಕ ಪೊಲೀಸರ ಮುಂದೆ ಸರೆಂಡರ್ ಆಗಿದ್ದಾರೆ.
A15 ಕಾರ್ತಿಕ್: ಪಟ್ಟಣಗೆರೆ ಶೆಡ್ನಲ್ಲಿ ಕೆಲಸ ಮಾಡುತ್ತಾರೆ. ರೇಣುಕಾಸ್ವಾಮಿಯ ಮೃತದೇಹ ಸಾಗಿಸಿ ಪೊಲೀಸರ ಮುಂದೆ ಸರೆಂಡರ್ ಆಗಿದ್ದಾರೆ.
A17 ನಿಖಿಲ್: 5 ಲಕ್ಷ ರೂಪಾಯಿ ಹಣ ಪಡೆದು ಮೃತದೇಹ ಸಾಗಿಸುವಲ್ಲಿ ಭಾಗಿಯಾಗಿದ್ದರು. ಹಣ ಪಡೆದು ಪೊಲೀಸರ ಮುಂದೆ ಸರೆಂಡರ್ ಆಗಿದ್ದರು.