ಗೋವಾದ ಮಾಂಡೋವಿ ನದಿಗೆ ಹಾರಿ ಉದ್ಯಮಿ ಆತ್ಮಹತ್ಯೆ: ಸಾವಿನ ಸುತ್ತ ಅನುಮಾನ

 ಹೊಸದಿಗಂತ ವರದಿ, ಕಾರವಾರ:

ಇಲ್ಲಿನ ಹಣಕೋಣ ಬಳಿ ಉದ್ಯಮಿಯೋರ್ವರನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದ ನಾಲ್ಕೇ ದಿನಗಳಲ್ಲಿ ಕಾರವಾರ ಮೂಲದ ಇನ್ನೋರ್ವ ಉದ್ಯಮಿಯ ಮೃತ ದೇಹ ಗೋವಾ ರಾಜ್ಯದ ಮಾಂಡೋವಿ ನದಿಯಲ್ಲಿ ದೊರಕಿದ್ದು ಈ ಎರಡು ಘಟನೆಗಳು ಪರಸ್ಪರ ಒಂದಕ್ಕೊಂದು ಸಂಬಂಧ ಹೊಂದಿದೆಯೇ ಎನ್ನುವ ಕುರಿತು ಮಾತುಗಳು ಕೇಳಿ ಬರುತ್ತಿವೆ.

ಭಾನುವಾರ ಬೆಳಿಗ್ಗೆ ಪೂಣಾದಲ್ಲಿ ಉದ್ಯಮಿಯಾಗಿದ್ದ ಕಾರವಾರದ ಹಣಕೋಣ ನಿವಾಸಿ ವಿನಾಯಕ ನಾಯ್ಕ ಎನ್ನುವವರನ್ನು ಕಾರಿನಲ್ಲಿ ಬಂದ ಐದು ಜನ ದುಷ್ಕರ್ಮಿಗಳ ತಂಡ ತಲವಾರ್ ಮತ್ತಿತರ ಮಾರಕಾಸ್ತ್ರಗಳಿಂದ ಬೆಳಗ್ಗಿನ ಜಾವ ಕೊಚ್ಚಿ ಕೊಲೆ ಮಾಡಿದ್ದರು.

ಈ ಘಟನೆಯಲ್ಲಿ ವಿನಾಯಕ ಅವರ ಪತ್ನಿಗೆ ಸಹ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಘಟನೆ ನಡೆದ ನಂತರ ಈ ಹತ್ಯೆಯಲ್ಲಿ ಕಾರವಾರ ಹಳಗಾ ಮೂಲದ ಉದ್ಯಮಿಯೊಬ್ಬರ ಪಾತ್ರ ಇರುವ ಕುರಿತು ಶಂಖೆ ವ್ಯಕ್ತವಾಗಿತ್ತು.

ಇದೀಗ ಗೋವಾದಲ್ಲಿ ಮಾಂಡೋವಿ ನದಿಗೆ ಹಾರಿ ಹಳಗಾ ಮೂಲದ ಉದ್ಯಮಿ ಗುರುಪ್ರಸಾದ್ ರಾಣೆ ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಮೃತ ದೇಹ ಪತ್ತೆಯಾಗಿದೆ.

ಹಣಕೋಣದ ಹತ್ಯಾ ಪ್ರಕರಣಕ್ಕೂ ಗೋವಾದಲ್ಲಿ ನಡೆದ ಆತ್ಮಹತ್ಯೆಗೂ ನಿಜವಾಗಿಯೂ ಸಂಬಂಧ ಇದೆಯೇ? ಹಣಕೋಣದ ಉದ್ಯಮಿಯ ಕೊಲೆ ಯಾವ ಕಾರಣಕ್ಕೆ ನಡೆಯಿತು ಎನ್ನುವ ಕುರಿತು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!