ಹೊಸದಿಗಂತ ಮಡಿಕೇರಿ:
ಮರಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ಆನೆಚೌಕೂರು ಬಳಿ ನಡೆದಿದೆ.
ಮೃತರನ್ನು ಗೋಣಿಕೊಪ್ಪದ ಜೋಡುಬೀಟಿ ನಿವಾಸಿ ಪ್ರಭು ಎಂಬವರ ಪತ್ನಿ ಮಂಜುಳಾ ಎಂದು ಗುರುತಿಸಲಾಗಿದೆ.
ಮಧ್ಯಾಹ್ನ ದಂಪತಿ ತೆರಳುತ್ತಿದ್ದ ಕಾರು ಗೋಣಿಕೊಪ್ಪ – ಪಿರಿಯಾಪಟ್ಟಣ ಮಾರ್ಗ ಮಧ್ಯದ ಆನೆಚೌಕೂರು ಬಳಿ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಮಂಜುಳಾ ಸಾವಿಗೀಡಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಪ್ರಭು ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಪತಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.