Thursday, September 11, 2025

FOOD | ಚಳಿ ಚಳಿ ವೆದರ್‌ಗೆ ಸಿಕ್ಕಾಪಟ್ಟೆ ಟೇಸ್ಟಿಯಾದ ಘೀ ಪುಡಿ ಮಸಾಲಾ ದೋಸೆ ಹೀಗೆ ಮಾಡಿ

ಸಾಮಾಗ್ರಿಗಳು
ದೋಸೆಹಿಟ್ಟು
ಬೆಣ್ಣೆ 
ಶೇಂಗಾ
ಕಡ್ಲೆ
ಬೆಳ್ಳುಳ್ಳಿ
ಖಾರದಪುಡಿ
ಉಪ್ಪು
ಕರಿಬೇವು
ಆಲೂಗಡ್ಡೆ ಪಲ್ಯ 

ಮಾಡುವ ವಿಧಾನ
ಮೊದಲು ಬಾಣಲೆಗೆ ಶೇಂಗಾ, ಕಡ್ಲೆ ಹಾಕಿ ಹುರಿಯಿರಿ
ನಂತರ ಅದನ್ನು ತಣ್ಣಗಾಗಲು ಬಿಡಿ, ಅದಕ್ಕೆ ಉಪ್ಪು, ಖಾರದಪುಡಿ, ಬೆಳ್ಳುಳ್ಳಿ ಹಾಕಿ 
ಆಮೇಲೆ ಪುಡಿ ಮಾಡಿ ಇಟ್ಟುಕೊಳ್ಳಿ
ಕಾದ ಹೆಂಚಿನ ಮೇಲೆ ದಪ್ಪನೆಯ ದೋಸೆ ಹಾಕಿ, ಅದನ್ನು ಎರಡೂ ಕಡೆ ಬೇಯಿಸಿ, ನಂತರ ಪುಡಿಯನ್ನು ಹಾಕಿ, ತುಪ್ಪ ಹಾಕಿ, ನಂತರ ಮೇಲೆ ಆಲೂಗಡ್ಡೆ ಪಲ್ಯ ಹಾಕಿ ತಿನ್ನಿ

ಇದನ್ನೂ ಓದಿ