ಸಾಧಾರಣ ಚಿಕನ್ ಫ್ರೈಡ್ ರೈಸ್‌ಗೆ ಸ್ವಲ್ಪ ಸಿಹಿ, ಸ್ವಲ್ಪ ನಟ್ಟಿ ಫ್ಲೇವರ್ ಸೇರಿಸಿದರೆ ಏನಾಗುತ್ತೆ ಗೊತ್ತಾ? ಅದೇ ಈ Honey Sesame Chicken Fried Rice ರೆಡಿ ಆಗುತ್ತೆ ಅಷ್ಟೆ. ಜೇನುತುಪ್ಪದ ಸಿಹಿತನ, ಎಳ್ಳಿನ ಸುಗಂಧ ಮತ್ತು ಜ್ಯೂಸಿ ಚಿಕನ್ ಸೇರಿ ಮೊದಲ ಬೈಟ್ ನಲ್ಲೇ ಮನಸ್ಸಿಗೆ ಹತ್ತಿರವಾಗೋ ರುಚಿ ಇದು.
ಬೇಕಾಗುವ ಪದಾರ್ಥಗಳು
ಅನ್ನ – 2 ಕಪ್
ಬೋನ್‌ಲೆಸ್ ಚಿಕನ್ – 250 ಗ್ರಾಂ
ಜೇನುತುಪ್ಪ – 2 ಟೇಬಲ್ ಸ್ಪೂನ್
ಸೋಯಾ ಸಾಸ್ – 2 ಟೇಬಲ್ ಸ್ಪೂನ್
ಎಳ್ಳು (Sesame seeds) – 1 ಟೇಬಲ್ ಸ್ಪೂನ್
ಬೆಳ್ಳುಳ್ಳಿ – 1 ಟೇಬಲ್ ಸ್ಪೂನ್
ಈರುಳ್ಳಿ – 1 (ಸ್ಲೈಸ್ ಮಾಡಿದ)
ಕ್ಯಾಪ್ಸಿಕಂ – ½ ಕಪ್
ಕ್ಯಾರೆಟ್ – ½ ಕಪ್
ಸ್ಪ್ರಿಂಗ್ ಆನಿಯನ್ – ಸ್ವಲ್ಪ
ಎಣ್ಣೆ – ಅಗತ್ಯವಷ್ಟು
ಉಪ್ಪು – ರುಚಿಗೆ ತಕ್ಕಂತೆ
ಕಾಳು ಮೆಣಸು ಪೌಡರ್ – ಸ್ವಲ್ಪ
ವಿನೆಗರ್ – 1 ಟೀ ಸ್ಪೂನ್
ಚಿಕನ್ ಮೆರಿನೇಶನ್:
ಚಿಕನ್‌ಗೆ ಸ್ವಲ್ಪ ಉಪ್ಪು, ಮೆಣಸು ಪೌಡರ್ ಮತ್ತು 1 ಟೇಬಲ್ ಸ್ಪೂನ್ ಸೋಯಾ ಸಾಸ್ ಹಾಕಿ 10–15 ನಿಮಿಷ ಮೆರಿನೇಟ್ ಮಾಡಿ. ನಂತರ ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಚಿಕನ್ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ ಬದಿಗೆ ಇಡಿ.
ಹನಿ–ಸೆಸಮಿ ಸಾಸ್ ತಯಾರಿ:
ಒಂದು ಬೌಲ್‌ನಲ್ಲಿ ಜೇನುತುಪ್ಪ, ಉಳಿದ ಸೋಯಾ ಸಾಸ್ ಮತ್ತು ವಿನೆಗರ್ ಮಿಕ್ಸ್ ಮಾಡಿ. ಫ್ರೈ ಮಾಡಿದ ಚಿಕನ್‌ಗೆ ಈ ಮಿಶ್ರಣ ಹಾಕಿ ಚೆನ್ನಾಗಿ ಕೋಟಿಂಗ್ ಆಗುವಂತೆ ಕಡಿಮೆ ಫ್ಲೇಮ್‌ನಲ್ಲಿ ಸ್ವಲ್ಪ ಹೊತ್ತು ಬೇಯಿಸಿ.
ದೊಡ್ಡ ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಬೆಳ್ಳುಳ್ಳಿ ಹಾಕಿ ಸಾಟೆ ಮಾಡಿ. ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ ಹಾಕಿ ಹೈ ಫ್ಲೇಮ್‌ನಲ್ಲಿ 2–3 ನಿಮಿಷ ಸ್ಟರ್ ಫ್ರೈ ಮಾಡಿ. ನಂತರ ಅನ್ನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಫೈನಲ್ ಟಚ್ ಆಗಿ ಹನಿ ಸೆಸಮಿ ಚಿಕನ್ ಅನ್ನು ರೈಸ್‌ಗೆ ಸೇರಿಸಿ, ಎಳ್ಳು ಮತ್ತು ಸ್ಪ್ರಿಂಗ್ ಆನಿಯನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರುಚಿ ನೋಡಿಕೊಂಡು ಉಪ್ಪು ಅಥವಾ ಮೆಣಸು ಸೇರಿಸಿ. ಹಾಟ್ ಆಗಿಯೇ ಸರ್ವ್ ಮಾಡಿ.


