ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12ರ ವಿಜೇತರಾಗಿ ಗಿಲ್ಲಿ ನಟ ಹೊರಹೊಮ್ಮಿದ್ದಾರೆ.ಬರುವ ಹಣವನ್ನು ಗಿಲ್ಲಿ ಏನು ಮಾಡ್ತಾರೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಿಗೂ ಇದೆ. ಇದರ ಬಗ್ಗೆ ನಟ ಮಾತನಾಡಿದ್ದಾರೆ.
ತುಂಬಾ ಖುಷಿ ಆಯ್ತು ನನಗೆ. ನಂಬೋಕೆ ಆಗ್ತಿಲ್ಲ. ಹೊರಗಡೆ ಬಂದ್ಮೇಲೆ ಇದೆಲ್ಲ ನಿಜನಾ ಅನ್ನಿಸ್ತಿದೆ. ಬಂದಿರೋ 50 ಲಕ್ಷದಲ್ಲಿ ಯಾವುದಾದ್ರೂ ಜಮೀನು ತಗೊಂಡು ವ್ಯವಸಾಯ ಏನಾದ್ರೂ ಮಾಡ್ಬೇಕು ಎಂದು ಗಿಲ್ಲಿ ಹೇಳಿಕೊಂಡಿದ್ದಾರೆ.
ನನಗೆ ಈಗಲೂ ನಂಬೋದಕ್ಕೆ ಆಗ್ತಿಲ್ಲ. ಇದು ನಿಜನಾ, ಸುಳ್ಳಾ ಅಂತ ಗೊತ್ತಾಗ್ತಿಲ್ಲ. ಪದೇ ಪದೇ ಮೈಕ್ ಇದ್ಯಾ ಅಂತ ನೋಡಿಕೊಳ್ತಿದ್ದೀನಿ. ನಾನು ಸುಮ್ನೆ ಹಾಡಿದ್ದ ಹಾಡುಗಳು ಇಷ್ಟೊಂದು ಫೇಮಸ್ ಆಗಿದೆ ಅಂದ್ರೆ ಖುಷಿ ಆಗತ್ತೆ ಎಂದಿದ್ದಾರೆ.
ಕಾವ್ಯ ಜೊತೆ ಮದುವೆ ಎಲ್ಲ ಏನೂ ಇಲ್ಲ. ಎಂಟ್ರಿ ಕೊಡುವಾಗ ಜಂಟಿಯಾಗಿ ನಾನು ಮತ್ತು ಕಾವ್ಯ ಹೋಗಿದ್ವಿ. ಆವಾಗ ಸುಮ್ನೆ ಹೇಳಿದ್ದು, ಅದೇ ಸಿಂಕ್ ಆಗೋಯ್ತು. ನಾವು 6 ಜನ ಫೈನಲಿಸ್ಟ್ ಇದ್ವಲ್ಲ. ನಮಗೆ ಎಷ್ಟು ಟೆನ್ಷನ್ ಆಗ್ತಿತ್ತು. ಟಾಪ್ 6ನಲ್ಲಿ ಇರೋರಲ್ಲಿ ಯಾರಾದರು ಒಬ್ಬರು ನನ್ನ ಪಕ್ಕ ನಿಲ್ತಾರೆ ಅಂತ ಮನಸ್ಸಿಗೆ ಅನ್ನಿಸಿತ್ತು. ಆದರೆ, ಊಹೆ ಮಾಡೋಕು ಆಗ್ತಿರಲಿಲ್ಲ ಏನಾಗುತ್ತೆ ಅಂತ ಎಂದು ಗೆಲುವಿನ ಕ್ಷಣವನ್ನು ನೆನೆದರು.


